Home » ಯುವಕನಿಗೆ ರೈಲು ಡಿಕ್ಕಿ | ಎರಡೂ ಕಾಲು ತುಂಡರಿಸಿಲ್ಪಟ್ಟು ಗಂಭೀರ | ಮಂಗಳೂರಿನ ಆಸ್ಪತ್ರೆಗೆ ದಾಖಲು

ಯುವಕನಿಗೆ ರೈಲು ಡಿಕ್ಕಿ | ಎರಡೂ ಕಾಲು ತುಂಡರಿಸಿಲ್ಪಟ್ಟು ಗಂಭೀರ | ಮಂಗಳೂರಿನ ಆಸ್ಪತ್ರೆಗೆ ದಾಖಲು

by Praveen Chennavara
0 comments

ರೈಲು ಹರಿದು ಯುವಕನೊಬ್ಬನ ಎರಡೂ ಕಾಲುಗಳು ಕತ್ತರಿಸಲ್ಪಟ್ಟ ಘಟನೆ ಮಂಗಳೂರಿನ ಜೋಕಟ್ಟೆಯಲ್ಲಿ ಶನಿವಾರ ನಡೆದಿದೆ.

ಬೈಕಂಪಾಡಿ ತೋಕೂರು ನಿವಾಸಿ ಚೇತನ್ ಕುಮಾರ್ (21) ಗಾಯಾಳು ಎಂದು ತಿಳಿದುಬಂದಿದೆ. ಇವರು ಮಂಗಳೂರಿನ ಸ್ಟೀಲ್ ಕಂಪೆನಿಯೊಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು,ಶನಿವಾರ ಕಾಲುದಾರಿಯ ಮೂಲಕ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಧಾರಾಕಾರ ಮಳೆ ಸುರಿಯುತ್ತಿದ್ದರಿಂದ ಕೊಡೆಯನ್ನು ಹಿಡಿದಿದ್ದರು.

ಈ ವೇಳೆ ರೈಲು ಹಳಿ ದಾಟುವಾಗ ರೈಲು ಬಂದಿರುವುದು ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ. ಘಟನೆಯಲ್ಲಿ ಈತನ ಎರಡೂ ಕಾಲುಗಳು ಕತ್ತರಿಸಲ್ಪಟ್ಟಿವೆ.

ಹಳಿಯ ಪಕ್ಕದಲ್ಲೇ ಬಿದ್ದು ನರಳಾಡುತ್ತಿದ್ದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗಾಯಾಳುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment