Home » ಇಂದಿನಿಂದ ರೈಲು ಪ್ರಯಾಣ ದರ ಹೆಚ್ಚಳ; ಹೊಸ ಟಿಕೆಟ್‌ ದರ ವಿವರ ಇಲ್ಲಿದೆ

ಇಂದಿನಿಂದ ರೈಲು ಪ್ರಯಾಣ ದರ ಹೆಚ್ಚಳ; ಹೊಸ ಟಿಕೆಟ್‌ ದರ ವಿವರ ಇಲ್ಲಿದೆ

0 comments
Train

ನವದೆಹಲಿ: ದೇಶಾದ್ಯಂತ ಇಂದಿನಿಂದ ಅನ್ವಯವಾಗುವ ರೀತಿಯಲ್ಲಿ ರೈಲ್ವೆ ಇಲಾಖೆ ಪ್ರಯಾಣ ದರ ಏರಿಕೆ ಮಾಡಲಾಗಿದೆ. ಉಪನಗರ ರೈಲು ಪ್ರಯಾಣದ ದರವನ್ನು ಹೆಚ್ಚಿಸಿಲ್ಲ ಆದರೂ, ದೀರ್ಘ ಪ್ರಯಾಣದ ದರವನ್ನು ರೈಲ್ವೆ ಸಚಿವಾಲಯ ಹೆಚ್ಚಳ ಮಾಡಿದೆ. ಪ್ರತಿ 500 ಕಿ.ಮೀ.ರೂ. ಹೆಚ್ಚಳ ಮಾಡಲಾಗಿದೆ.

ಡಿ.21 ರಂದು ಸಚಿವಾಲಯವು ಪ್ರಯಾಣಿಕರ ದರವನ್ನು ಹೆಚ್ಚಳವನ್ನು ಘೋಷಣೆ ಮಾಡಿದ್ದು, ಡಿ.26 ರಿಂದ ಜಾರಿಗೆ ಬರಲಿದೆ.

215 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣಕ್ಕಾಗಿ ಸಾಮಾನ್ಯ ವರ್ಗದಲ್ಲಿ ಪ್ರತಿ ಕಿ.ಮೀ ಗೆ ಒಂದು ಪೈಸೆ, ಮೇಲ್‌, ಎಕ್ಸ್‌ಪ್ರೆಸ್‌ ರೈಲುಗಳ ಎಸಿ ಅಲ್ಲದ ವರ್ಗದಲ್ಲಿ ಪ್ರತಿ ಕಿ.ಮೀ.ರಿಗೆ ಎರಡು ಪೈಸೆ ಮತ್ತು ಎಲ್ಲಾ ರೈಲುಗಳ ಎಸಿ ವರ್ಗದ ದರವನ್ನು ಹೆಚ್ಚಳ ಮಾಡಲಾಗಿದೆ. ಡಿ.26 ರ ಮೊದಲು ಬುಕ್‌ ಮಾಡಿದ ಟಿಕೆಟ್‌ಗಳಿಗೆ ಈ ಬದಲಾವಣೆ ಅನ್ವಯಿಸುವುದಿಲ್ಲ.

215 ಕಿಲೋಮೀಟರ್ ದೂರದವರೆಗಿನ ಸಾಮಾನ್ಯ ದರ್ಜೆಯ ಟಿಕೆಟ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ 215 ಕಿಮೀಗಿಂತ ಹೆಚ್ಚಿನ ದೂರಕ್ಕೆ ಪ್ರತಿ ಕಿಮೀಗೆ 1 ಪೈಸೆ ವೆಚ್ಚವಾಗುತ್ತದೆ. ಮೇಲ್ ಅಥವಾ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಹವಾನಿಯಂತ್ರಿತವಲ್ಲದ ಕೋಚ್‌ಗಳಿಗೆ, ಪ್ರತಿ ಕಿಮೀಗೆ 2 ಪೈಸೆ ಹೆಚ್ಚಳವಾಗಲಿದೆ. ಹವಾನಿಯಂತ್ರಿತ ಕೋಚ್‌ಗಳಲ್ಲಿ ಪ್ರಯಾಣದ ವೆಚ್ಚವನ್ನು ಸಹ ಪ್ರತಿ ಕಿಮೀಗೆ 2 ಪೈಸೆ ಹೆಚ್ಚಿಸಲಾಗಿದೆ.

ಹೊಸ ದರಗಳು ಜಾರಿಗೆ ಬಂದ ನಂತರ ಹವಾನಿಯಂತ್ರಿತವಲ್ಲದ ಬೋಗಿಗಳಲ್ಲಿ 500 ಕಿ.ಮೀ ಪ್ರಯಾಣಕ್ಕೆ 10 ರೂ. ಹೆಚ್ಚಾಗಲಿದೆ. ಇದರಿಂದ ಪ್ರಯಾಣಿಕರಿಗೆ ಹೊರಯಾಗುವುದು ಖಚಿತವಾಗಿದೆ.

ತೇಜಸ್ ರಾಜಧಾನಿ, ರಾಜಧಾನಿ, ಶತಾಬ್ದಿ, ದುರಂತೋ, ವಂದೇ ಭಾರತ್, ಹಮ್ಸಾಫರ್, ಅಮೃತ್ ಭಾರತ್, ತೇಜಸ್, ಮಹಾಮಾನ, ಗತಿಮಾನ್, ಅಂತ್ಯೋದಯ, ಗರೀಬ್ ರಥ, ಜನ ಶತಾಬ್ದಿ, ಯುವ ಎಕ್ಸ್‌ಪ್ರೆಸ್, ನಮೋ ಭಾರತ್ ರಾಪಿಡ್ ರೈಲ್ ಸೇರಿದಂತೆ ಪ್ರಮುಖ ರೈಲುಗಳ ದರ ಬದಲಾಗಲಿದೆ.

You may also like