Train Mileage : ರೈಲುಗಳು ಆರಂಭದಲ್ಲಿ ಕಲ್ಲಿದ್ದಲಿನ ಮೂಲಕ ಚಲಿಸುತ್ತಿದ್ದವು. ನಂತರ ಡೀಸೆಲ್ ಮೂಲಕ ರನ್ ಆಗಲು ಶುರುವಾಗಲು. ಇಂದು ಡೀಸೆಲ್ ಹಾಗೂ ವಿದ್ಯುತ್ತಿನ ಮುಖಾಂತರವೂ ರೈಲು ಚಲಿಸುತ್ತವೆ. ರೈಲಿನ ಇಂಜಿನ್ ಸ್ಟಾರ್ಟ್ ಮಾಡಲು ಸಾಕಷ್ಟು ಇಂಧನ ಬೇಕು ಎನ್ನಲಾಗುತ್ತದೆ. ಅಲ್ಲದೆ ಒಂದು ದಿನ ರೈಲಿಗೆ ಲಕ್ಷಾಂತರ ಲೀಟರ್ ಇಂಧನವನ್ನು ಹಾಕಲಾಗುತ್ತೆ. ಹಾಗಾದರೆ ಒಂದು ಲೀಟರ್ ಇಂಧನದಲ್ಲಿ ರೈಲು ಎಷ್ಟು ದೂರ ಕ್ರಮಿಸಬಹುದು. ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಫ್ಯಾಕ್ಟ್.
12 ಬೋಗಿಗಳ ಒಂದು ಪ್ಯಾಸೆಂಜರ್ ರೈಲು 1 ಕಿಲೋಮೀಟರ್ ದೂರವನ್ನು ಕ್ರಮಿಸಲು ಸುಮಾರು 6 ಲೀಟರ್ ಡೀಸೆಲ್ ಅನ್ನು ಬಳಸುತ್ತದೆ. 12 ಬೋಗಿಗಳ ಎಕ್ಸ್‌ಪ್ರೆಸ್ ರೈಲು ಒಂದು ಕಿಲೋಮೀಟರ್ ಕ್ರಮಿಸಲು ಸುಮಾರು 4.5 ಲೀಟರ್ ಡೀಸೆಲ್ ಅಗತ್ಯವಿದೆ. 1 ಲೀಟರ್ ಡೀಸೆಲ್ ಇಂಧನವು ಪ್ಯಾಸೆಂಜರ್ ರೈಲನ್ನು 0.16 ಕಿಲೋಮೀಟರ್ (ಸರಿಸುಮಾರು 160 ಮೀಟರ್), ಮತ್ತು ಎಕ್ಸ್‌ಪ್ರೆಸ್ ರೈಲು 0.2 ಕಿಲೋಮೀಟರ್ (ಸರಿಸುಮಾರು 200 ಮೀಟರ್) ಕ್ರಮಿಸಬಹುದು.
ಮತ್ತೊಂದೆಡೆ, ಸೂಪರ್‌ಫಾಸ್ಟ್ ರೈಲುಗಳು 1 ಲೀಟರ್ ಡೀಸೆಲ್‌ನಲ್ಲಿ ಸುಮಾರು 230 ಮೀಟರ್ ಪ್ರಯಾಣಿಸಬಹುದು. ಕಾರು ಮೈಲೇಜ್ ವಿಭಿನ್ನ ಮಾದರಿಗಳನ್ನು ಅವಲಂಬಿಸಿ ಬದಲಾಗುವಂತೆಯೇ, ಪ್ರತಿ ರೈಲಿನ ಮೈಲೇಜ್ ಸಹ ಬದಲಾಗುತ್ತದೆ, ಇದು ಕೋಚ್‌ಗಳ ಸಂಖ್ಯೆ, ವೇಗ ಮತ್ತು ಅದು ಸಾಗಿಸುವ ಹೊರೆಯನ್ನು ಅವಲಂಬಿಸಿರುತ್ತದೆ.
