Home » Holiday : ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ- ನಾಳೆ ಶಾಲಾ, ಕಾಲೇಜುಗಳಿಗೆ ರಜೆ ?

Holiday : ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ- ನಾಳೆ ಶಾಲಾ, ಕಾಲೇಜುಗಳಿಗೆ ರಜೆ ?

0 comments

Holiday : ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಇಂದಿನಿಂದ ರಾಜ್ಯಾದ್ಯಂತ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದು ಈ ಹಿನ್ನೆಲೆಯಲ್ಲಿ ರಸ್ತೆಗಳಿಗೆ ಬಸ್ ಗಳು ಇಳಿಯುತ್ತಿಲ್ಲ. ಹೀಗಾಗಿ ಶಾಲಾ- ಕಾಲೇಜುಗಳಿಗೆ ಬಸ್ಸಿನಲ್ಲಿ ಓಡಾಡುವ ಮಕ್ಕಳಿಗೆ ತೊಂದರೆಯಾಗುತ್ತಿದೆ, ಸೋ.. ರಜೆ ಸಿಗಲಿದೆಯಾ ಎಂಬ ಗೊಂದಲ ಉದ್ಭವವಾಗಿದೆ?

ಹೌದು, ನೌಕರರ ಈ ಮುಷ್ಕರದಿಂದಾಗಿ ಪ್ರಮುಖವಾಗಿ ಈ ಸಮಸ್ಯೆ ಮಕ್ಕಳಿಗೆ ತಟ್ಟಲಿದೆ. ದೂರದ ಊರುಗಳಿಂದ ಶಾಲೆ ಕಾಲೇಜಿಗೆ ಹೋಗಲು ಬಸ್‌ಗಳನ್ನೇ ಅವಲಂಬಿಸಿಕೊಂಡಿರುತ್ತಾರೆ. ಕೆಲವು ಪ್ರದೇಶಗಳಲ್ಲಿ ಖಾಸಗಿ ವಾಹನ ಸಹ ಇರುವುದಿಲ್ಲ. ಇಂತ ಮಕ್ಕಳು ಶಾಲೆಗೆ ರಜೆ ಹಾಕುವ ಅನಿವಾರ್ಯತೆ ಎದುರಾಗಿದೆ. ಅಲ್ಲದೆ ದೂರದ ಊರುಗಳಿಂದ ಪ್ರಯಾಣಿಸುವ ಶಿಕ್ಷಕರು ಸಹ ಸಾರಿಗೆ ಬಸ್‌ಗಳನ್ನೇ ಅವಲಂಭಿಸಿದ್ದಾರೆ. ಅವರೂ ಸಹ ತಮ್ಮ ಕಾರ್ಯಸ್ಥಳಕ್ಕೆ ತಲುಪಲು ಕಷ್ಟಕರವಾಗುತ್ತದೆ. ಪರಿಣಾಮ ಈ ಮುಷ್ಕರ ದೊಡ್ಡ ಮಟ್ಟದಲ್ಲಿ ಶಾಲಾ ಕಾಲೇಜಿಗೆ ಹೊಡೆತ ಬೀಳಲಿದೆ.

ಅದಾಗ್ಯೂ ಸಂಬಂಧಿಸಿದ ಅಧಿಕಾರಿಗಳು ರಜೆ ನೀಡುವ ಕುರಿತಾಗಲಿ ಅಥವಾ ಇತರೆ ಪರ್ಯಾಯ ವ್ಯವಸ್ಥೆ ಬಗ್ಗೆಯಾಗಲಿ ಮಾಹಿತಿ ನೀಡಿಲ್ಲ. ಹೀಗಾಗಿ ಶಾಲಾ ಕಾಲೇಜುಗಳಿಗೆ ರಜೆ ಇದೆಯೋ ಅಥವಾ ಶಾಲಾ ಕಾಲೇಜುಗಳಿಗೆ ಹೇಗೆ ತೆರಳುವುದು ಎಂಬ ಆತಂಕ ಎದುರಾಗಿದೆ. ಒಟ್ಟಲ್ಲಿ ಇದು ವಿದ್ಯಾರ್ಥಿಗಳಿಗೆ ಸಾಕಷ್ಟು ಕಷ್ಟವನ್ನು ಒಡ್ದುವ ಪರಿಸ್ಥಿತಿಯಾಗಿದೆ. ದೂರದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ತೆರಳುವುದು ಸದ್ಯ ಕಷ್ಟದ ವಿಚಾರವೇ ಆಗಿದೆ.

ಇದನ್ನೂ ಓದಿ: H C Mahadevappa: KRS ಕಟ್ಟಿದ್ದು ಟಿಪ್ಪು ಅಂತ ನಾನು ಎಲ್ಲಿಯೂ ಹೇಳಿಲ್ಲ- ಸಚಿವ ಮಹಾದೇವಪ್ಪ ಯೂ ಟರ್ನ್

You may also like