Home » Crime: ಮಂಗಳೂರಿಗೆ ಮೀನಿನ ಜೊತೆಗೆ ಗೋಮಾಂಸ ತುಂಬಿ ಸಾಗಾಟ! ಭಜರಂಗದಳ ಕಾರ್ಯಕರ್ತರಿಗೆ ಸಿಕ್ಕಿ ಬಿದ್ದ ಖದೀಮರು!

Crime: ಮಂಗಳೂರಿಗೆ ಮೀನಿನ ಜೊತೆಗೆ ಗೋಮಾಂಸ ತುಂಬಿ ಸಾಗಾಟ! ಭಜರಂಗದಳ ಕಾರ್ಯಕರ್ತರಿಗೆ ಸಿಕ್ಕಿ ಬಿದ್ದ ಖದೀಮರು!

0 comments

Crime: ಅಕ್ರಮವಾಗಿ ತಡರಾತ್ರಿ ಗೋಮಾಂಸ ಸಾಗಾಟ ಮಾಡ್ತಿದ್ದ ಗೂಡ್ಸ್ ವಾಹನವನ್ನು ಭಜರಂಗದಳ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಳಗಾವಿಯಿಂದ ಮಂಗಳೂರಿಗೆ ಅಕ್ರಮವಾಗಿ ಒಂದು ಟನ್ ಗೋಮಾಂಸವನ್ನು ಸಾಗಾಟ ಮಾಡುವಾಗ ಭಜರಂಗದಳ ಕಾರ್ಯಕರ್ತರು ಪತ್ತೆ ಹಚ್ಚಿ ಹುಬ್ಬಳ್ಳಿ-ಧಾರವಾಡ ಬೈಪಾಸ್ ಪೊಲೀಸರಿಗೆ ಒಪ್ಪಿಸಿದ್ದಾರೆ.

ಭಜರಂಗದಳ ಕಾರ್ಯಕರ್ತರು, ನರೇಂದ್ರ ಬೈಪಾಸ್‌ನಿಂದ ವಾಹನದ ಬೆನ್ನು ಹತ್ತಿದಾಗ, ವಾಹನದ ಚಾಲಕ ಅತಿವೇಗದಲ್ಲಿ ವಾಹನವನ್ನು ಚಲಾಯಿಸಿ, ಮನಸೂರ ರಸ್ತೆಯವರೆಗೆ ತಲುಪಿದನು. ಕೊನೆಗೆ ಭಯದಿಂದ ವಾಹನವನ್ನು ರಸ್ತೆ ಬದಿಯಲ್ಲೇ ಬಿಟ್ಟು ಎಸ್ಕೆಪ್ ಆಗಿದ್ದು, ವಾಹನ ತಪಾಸಣೆ ಸಂದರ್ಭ ಗೋಮಾಂಸವನ್ನು ಮರೆಮಾಚಲು ಮುಂಭಾಗದ ಒಂದೆರಡು ಸಾಲುಗಳಲ್ಲಿ ಮೀನುಗಳನ್ನು ತುಂಬಲಾಗಿತ್ತು ಎಂದು ಗೊತ್ತಾಗಿದೆ.

ತಕ್ಷಣವೇ ಕಾರ್ಯಕರ್ತರು ಈ ಬಗ್ಗೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ವಾಹನವನ್ನು ಪರಿಶೀಲಿಸಿ, ಸುಮಾರು ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like