Home » Belthangady: ಬೆಳ್ತಂಗಡಿ: ಚಲಿಸುತ್ತಿದ್ದ ಸ್ಕೂಟ‌ರ್ ಮೇಲೆ ಉರುಳಿ ಬಿದ್ದ ಮರ; ದಂಪತಿ ಗಂಭೀರ!

Belthangady: ಬೆಳ್ತಂಗಡಿ: ಚಲಿಸುತ್ತಿದ್ದ ಸ್ಕೂಟ‌ರ್ ಮೇಲೆ ಉರುಳಿ ಬಿದ್ದ ಮರ; ದಂಪತಿ ಗಂಭೀರ!

0 comments

Belthangady: ಮಿತ್ತಬಾಗಿಲು ಗ್ರಾಮದ ಕುಕ್ಕಾವಿನ ಕೊಪ್ಪದಗಂಡಿ ಎಂಬಲ್ಲಿ ಚಲಿಸುತ್ತಿದ್ದ ಸ್ಕೂಟರ್ ಮೇಲೆ ಭಾರೀ ಗಾಳಿ ಮಳೆಯ ಪರಿಣಾಮ ಮರ ಉರುಳಿ ಬಿದ್ದು ದಂಪತಿ ಗಾಯಗೊಂಡ ಘಟನೆ ನಡೆದಿದೆ. ಕೂಡಲೇ ಸ್ಥಳೀಯರು ಆಗಮಿಸಿ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲು ಹಾಗೂ ಮರ ಮತ್ತು ವಾಹನವನ್ನು ತೆರವುಗೊಳಿಸಲು ಸಹಕರಿಸಿದರು. ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಗಂಭೀರವಾಗಿ ಗಾಯಗೊಂಡ ದಂಪತಿ ಕಡಿರುದ್ಯಾವರ ಗ್ರಾಮದ ಎರ್ಮಾಲ್ ಫಲ್ಕೆಯ ಗುಮ್ಮಣ್ಣ ಹಾಗೂ ವಿಮಲಾ ಎಂದು ತಿಳಿದು ಬಂದಿದೆ.

You may also like