Uttara Kannada: ಪ್ರತಿವರ್ಷದಂತೆ ಈ ವರ್ಷವೂ ಕೂಡ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿಯಾಗಿ ಮಳೆ ಸುರಿಯುತ್ತಿದ್ದು, ಕಳೆದ ಕೆಲವು ವರ್ಷಗಳಿಂದಲೂ ಕೂಡ ಗುಡ್ಡ ಕುಸಿತದ ಸಮಸ್ಯೆ ಆ ಭಾಗದ ಜನರನ್ನು ಕಾಡುತ್ತಿದೆ. ಈ ಬಾರಿಯೂ ಕೂಡ ಗುಡ್ಡದಂಚಿನ ನಿವಾಸಿಗಳನ್ನು ಮನೆ ಬಿಟ್ಟು ಹೊಗುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಸದ್ಯ ಮಳೆ ಕಡಿಮೆ ಆಗಿದ್ದರು ಕೂಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣ್ಣು ಕುಸಿತ ಉಂಟಾಗಿದ್ದು, ಅದರ ತೆಲುಗು ಕಾರ್ಯ ನಡೆಯದೇ ಇರುವುದರಿಂದ ಅಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಕಾರವಾರ ನಗರ ಬಳಿ ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿರುವ ಎರಡು ಟನಲ್ ಪೈಕಿ ಒಂದು ಟನಲ್ ಮೇಲ್ಭಾಗದಲ್ಲಿ ಗುಡ್ಡ ಕುಸಿಯುವ ಹಂತದಲ್ಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಟನಲ್ ಬಳಿ ಬ್ಯಾರಿಗೇಟ್ ಹಾಕಿ ವಾಹನ ಸಂಚಾರ ನಿರ್ಬಂಧಿಸಿಲಾಗಿದೆ. ಇನ್ನು. ಕಾರವಾರ ತಾಲೂಕಿನ ಬಿಣಗಾದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿ ಮಣ್ಣು ಹಾಗೂ ಬಂಡೆ ಕಲ್ಲು ರಸ್ತೆ ಮೇಲೆ ಬಿದ್ದಿದೆ.
ಇನ್ನು ಶಿರಸಿ ತಾಲೂಕಿನ ದೇವಿಮನೆ ಘಟ್ಟಣದಲ್ಲಿ ಮೂರು ಕಡೆ ಗುಡ್ಡ ಕುಸಿತ ಉಂಟಾಗಿದ್ದು ಪ್ರಯಾಣಿಕರಲ್ಲಿ ಭಯ ಉಂಟು ಮಾಡಿದೆ. ಸದ್ಯ ಎರಡು ಸೇತುವೆಗಳ ಕಾಮಗಾರಿ ನಿರ್ಮಾಣ ಹಂತದಲ್ಲಿದ್ದು, ಲಘು ವಾಹನಗಳಿಗಷ್ಟೇ ಅನುವು ಮಾಡಿಕೊಡಲಾಗಿದೆ. ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದರೂ ಕೂಡ ಆದ್ದರಿಂದ ಉಂಟಾಗುವಂತಹ ಅನಾಹುತಗಳು ಇನ್ನೂ ಕೂಡ ಕಡಿಮೆಯಾಗಿಲ್ಲ.
