Home » Nobel Prize : ನುಚ್ಚು ನೂರಾದ ಟ್ರಂಪ್ ಕನಸು – ವೆನೆಜುವೆಲಾದ ಮರಿಯಾ ಕೊರಿನಾ ಮಚಾಡೊ ಮೂಡೆಗೀರಿದ ನೊಬೆಲ್ ಶಾಂತಿ ಪ್ರಶಸ್ತಿ!!

Nobel Prize : ನುಚ್ಚು ನೂರಾದ ಟ್ರಂಪ್ ಕನಸು – ವೆನೆಜುವೆಲಾದ ಮರಿಯಾ ಕೊರಿನಾ ಮಚಾಡೊ ಮೂಡೆಗೀರಿದ ನೊಬೆಲ್ ಶಾಂತಿ ಪ್ರಶಸ್ತಿ!!

0 comments

Nobel Prize: ತೆರಿಗೆಯನ್ನು ಮುಂದಿಟ್ಟುಕೊಂಡು ಹುಚ್ಚಾಟ ಆಡುತ್ತಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇದೀಗ ಭಾರಿ ನಿರಾಸೆ ಉಂಟಾಗಿದೆ. ಕಾರಣ ವೆನೆಜುವೆಲಾದ ಮರಿಯಾ ಕೊರಿನಾ ಮಚಾಡೊ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ.

ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನಗೆ ಈ ಸಲದ ಮೊಬೈಲ್ ಶಾಂತಿ ಪ್ರಶಸ್ತಿಯನ್ನು ಕೊಡಬೇಕೆಂದು ಭಾರಿ ಲಾಭ ನಡೆಸಿದ್ದರು. ತೆರಿಗೆ ಹೆಚ್ಚಳದ ಬೆದರಿಕೆಯನ್ನು ಕೂಡ ಒಡ್ಡಿದ್ದರು. ಹೀಗಾಗಿ ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಯಾರ ಪಾಲಾಗಲಿದೆ ಎಂಬ ಕುತೂಹಲ ಹೆಚ್ಚಾಗಿತ್ತು. ಆದರೀಗ ತಮಗೇ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಬೇಕೆಂದು ಅವಕಾಶ ಸಿಕ್ಕಾಗಲೆಲ್ಲ ಘೋಷಿಸಿಕೊಳ್ಳುತ್ತಿದ್ದ ಟ್ರಂಪ್ ಅವರಿಗೆ ಭಾರೀ ನಿರಾಸೆಯಾಗಿದೆ.

ಕಾರಣ ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವದ ಹಕ್ಕುಗಳನ್ನು ಉತ್ತೇಜಿಸುವ ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆಯನ್ನು ಸಾಧಿಸುವ ಅವರ ಹೋರಾಟಕ್ಕಾಗಿ ಮಾರಿಯಾ ಕೊರಿನಾ ಮಚಾಡೊ ಅವರಿಗೆ 2025 ರ ನೊಬೆಲ್ ಸಮಿತಿಯು ಪ್ರಶಸ್ತಿ ನೀಡಲಾಗಿದೆ.

ವೆನೆಜುವೆಲಾದ ಪ್ರಜಾಪ್ರಭುತ್ವ ಪರ ಚಳವಳಿಯ ಕೇಂದ್ರ ವ್ಯಕ್ತಿಯಾದ ಮರಿಯಾ ಕೊರಿನಾ ಮಚಾಡೊ ಪ್ಯಾರಿಸ್ಕಾ ಲ್ಯಾಟಿನ್ ಅಮೆರಿಕಾದಲ್ಲಿ ನಾಗರಿಕ ಹಕ್ಕಿನ ಹೋರಾಟದ ಪ್ರಮುಖ ಶಕ್ತಿಯಾಗಿದ್ದಾರೆ. ದಶಕಗಳಿಂದ ಸರ್ವಾಧಿಕಾರಿ ನಿಕೋಲಸ್ ಮಡುರೊ ಅವರ ದಬ್ಬಾಳಿಕೆಯ ಆಡಳಿತವನ್ನು ಧಿಕ್ಕರಿಸಿ, ಬೆದರಿಕೆಗಳು, ಬಂಧನಗಳು ಮತ್ತು ರಾಜಕೀಯ ಕಿರುಕುಳವನ್ನು ಅನುಭವಿಸಿದ್ದಾರೆ. ನಿರಂತರ ಬೆದರಿಕೆ ಹಾಗೂ ಅಪಾಯವನ್ನು ಮೆಟ್ಟಿನಿಂತ ಮಚಾಡೊ ಅವರು ವೆನೆಜುವೆಲಾದಲ್ಲಿ ಶಾಂತಿ ನೆಲೆಸುವಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ. ಶಾಂತಿಯುತ ಪ್ರತಿರೋಧ ಮತ್ತು ಮುಕ್ತ ಚುನಾವಣೆಗಳ ಒತ್ತಾಯದ ಮೂಲಕ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ್ದಾರೆ. ಪ್ರಸ್ತುತ ವೆನೆಜುವೆಲಾದ ರಾಜಕಾರಣಿ ಮತ್ತು ಕೈಗಾರಿಕಾ ಎಂಜಿನಿಯರ್, ಅವರು ವೆನೆಜುವೆಲಾದ ವಿರೋಧ ಪಕ್ಷದ ಪ್ರಮುಖ ನಾಯಕಿಯಾಗಿದ್ದಾರೆ. ಅವರು 2011 ರಿಂದ 2014 ರವರೆಗೆ ರಾಷ್ಟ್ರೀಯ ವಿಧಾನಸಭೆಯ ಚುನಾಯಿತ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ:U T Khadar: ಯುಟಿ ಖಾದರ್ ಗೆ ಮಂತ್ರಿ ಪಟ್ಟ? ಮುಂದಿನ ಸ್ಪೀಕರ್ ಯಾರು?

You may also like