Home » Bride Rejects Marriage: ತಾಳಿ ಕಟ್ಟುವ ವೇಳೆ ಈ ಮದ್ವೆ ಬೇಡ ಎಂದು ಹೊಸ ನಾಟಕ ಶುರು ಹಚ್ಚಿಕೊಂಡ ವಧು! ಯಾಕೆ ಅಂತೀರಾ, ಇಲ್ಲಿದೆ ಟ್ವಿಸ್ಟ್?

Bride Rejects Marriage: ತಾಳಿ ಕಟ್ಟುವ ವೇಳೆ ಈ ಮದ್ವೆ ಬೇಡ ಎಂದು ಹೊಸ ನಾಟಕ ಶುರು ಹಚ್ಚಿಕೊಂಡ ವಧು! ಯಾಕೆ ಅಂತೀರಾ, ಇಲ್ಲಿದೆ ಟ್ವಿಸ್ಟ್?

2 comments
Bride Rejects Marriage

Bride Rejects Marriage: ಮದುವೆ ನಿಶಿತಾರ್ಥ ಆದಮೇಲೆ ಯಾವ ಕ್ಷಣದಲ್ಲಿ ಬೇಕಾದರೂ ಮದುವೆ ನಿಲ್ಲಬಹುದು. ಅದರಲ್ಲೂ ಮದುವೆ ನಿಲ್ಲಿಸೋಕೆ ಅಂತಾನೆ ಕೊನೆ ಕ್ಷಣದಲ್ಲಿ ವಿಲ್ಲನ್ ಗಳು ಹುಟ್ಟಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಮದುವೆಯಲ್ಲಿ ವಧುವೇ ವಿಲ್ಲನ್ ಆಗಿಬಿಟ್ಟಿದ್ದಾಳೆ.

ತುಮಕೂರು ಜಿಲ್ಲೆ‌ ಕೊರಟಗೆರೆ ತಾಲೂಕಿನ ಕೊಳಾಲದಲ್ಲಿ ಅದ್ಧೂರಿಯಾಗಿ ಆರತಕ್ಷತೆ ಮುಗಿಸಿ ಇನ್ನೇನು ಮುಹೂರ್ತದಲ್ಲಿ ತಾಳಿ ಕಟ್ಟುವುದೊಂದೇ ಬಾಕಿ ಇತ್ತು. ಆದ್ರೆ, ವಧು ಈ ಮದುವೆ ಬೇಡ ಎಂದು ಹಸೆಮಣೆಯಿಂದ ಚಂಗನೆ ಮೇಲೆದ್ದಿದ್ದಾಳೆ. ಇದರಿಂದ ಕಲ್ಯಾಣ ಮಂಟಪದಲ್ಲಿ ನೆರೆದಿದ್ದವರು ಗಾಬರಿಗೊಂಡಿದ್ದಾರೆ.

ವಧು ತಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಈ ಮದುವೆ ಬೇಡ ಎಂದ ವಧು (Bride Rejects Marriage) ಹಸೆಮಣೆಯಿಂದ ಮೇಲೆದ್ದಿದ್ದಾಳೆ. ಈ ಮಾತು ಕೇಳಿದ ಕೂಡಲೇ, ಅಲ್ಲೇ ಮದುವೆ ಮಂಟಪದಲ್ಲಿ ವಧು ಹಾಗೂ ವರನ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಇದೀಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ನೆಲಮಂಗಲ ತಾಲೂಕಿನ ದೊಡ್ಡೆಬೆಲೆ ಗ್ರಾಮದ ಯುವತಿ ಒಬ್ಬಳ ಮದುವೆ ದೊಡ್ಡಬಳ್ಳಾಪುರ ತಾಲೂಕಿನ ಮೂಡ್ಲಕಾಳೇನಹಳ್ಳಿಯ ವೆಂಕಟೇಶ್ ಜೊತೆ ನಿಶ್ಚಯವಾಗಿತ್ತು. ಅದರಂತೆ ಎರಡೂ ಕುಟುಂಬಸ್ಥರು ಮದ್ವೆಗೆ ಭರ್ಜರಿ ತಯಾರಿ ಮಾಡಿಕೊಂಡಿದ್ದರು. ಅಲ್ಲದೇ ಆಗಸ್ಟ್ 27 ರಾತ್ರಿ ಕೆಸಿಎನ್​ ಕನ್ವೆನ್ಷನ್ ಹಾಲ್​ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವೂ ಮುಗಿದಿತ್ತು.

ನವ್ಯಾ ಹಾಗೂ ವೆಂಕಟೇಶ್ ಸ್ಟೇಜ್​ ಮೇಲೆ ಒಬ್ಬರಿಗೊಬ್ಬರು ನಗುನಗುತ್ತಲೇ ಫೋಟೋಗೆ ಫೋಸ್ ನೀಡಿದ್ದರು. ಆದ್ರೆ, ಇನ್ನೇನು ಬೆಳಗ್ಗೆ ಮುಹೂರ್ತದಲ್ಲಿ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ವಧು ಹೊಸ ನಾಟಕ ಶುರು ಮಾಡಿದ್ದಾಳೆ.

ಯಾವುದೇ ಕಾರಣಕ್ಕೂ ನಾನು ಮದುವೆಯಾಗುವುದಿಲ್ಲವೆಂದು ವಧು ಬಿಗಿಪಟ್ಟು ಹಿಡಿದಿದ್ದಾಳೆ. ಮತ್ತೊಂದೆಡೆ ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚುಮಾಡಿದ್ದೇವೆ. ಮೂರು ತಿಂಗಳು ಮೊದಲೇ ಇಬ್ಬರಿಗೂ ಒಂದು ಲಕ್ಷ ರೂ. ಖರ್ಚು ಮಾಡಿ ಎಂಗಜ್ಮೆಂಟ್ ಮಾಡಿದ್ದೇವೆ. ಇದೀಗ ಏಕಾಏಕಿ ವಧು ಮದುವೆಯೇ ಬೇಡ ಅಂದ್ರೆ ಹೇಗೆ ಎಂದು ವರನ ಕಡೆಯವರು ಆಕ್ರೋಶಗೊಂಡಿದ್ದಾರೆ. ಸದ್ಯ ರಾಜಿ ಪಂಚಾಯಿತಿ ನಡೆಯುತ್ತಿದೆ.

ಸದ್ಯ ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯಿತಿ ಸರ್ಕಾಸ್ ಕುಟುಂಬಸ್ಥರ ನಡುವೆ ನಡೆಯುತ್ತಿದ್ದು, ಈ ಸಂಧಾನ ಸಭೆಯಲ್ಲಿ ವಧು ಪ್ರಿಯಕರ ಸಹ ಹಾಜರಾಗಿದ್ದಾನೆ.

ಇದನ್ನೂ ಓದಿ: BJP MP: ಬಿಜೆಪಿ ಸಂಸದನ ಮನೆಯಲ್ಲಿ 10 ವರ್ಷದ ಬಾಲಕನ ಶವ ಪತ್ತೆ ; ಬಾಲಕನ ಸಾವಿನ ಸುತ್ತ ಅನುಮಾನದ ಹುತ್ತ !!!

You may also like

Leave a Comment