Tumakuru : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಜೋರಾಗಿ ಸದ್ದು ಮಾಡುತ್ತಿದೆ. ಅದರೊಂದಿಗೆ ನವೆಂಬರ್ ಕ್ರಾಂತಿಯ ಕುರಿತು ಕೂಡ ಸಾಕಷ್ಟು ವಿಚಾರಗಳು ಚರ್ಚೆಯಾಗುತ್ತಿವೆ. ಈ ನಡುವೆ ತುಮಕೂರಿನಲ್ಲಿ ದೈವ ಒಂದು ಡಿಕೆ ಶಿವಕುಮಾರ್ ಅವರು ಸದ್ಯದಲ್ಲೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಭವಿಷ್ಯ ನುಡಿದಿದೆ.
ಹೌದು. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಶ್ರೀ ಗುರು ಗಿರಿ ಸಿದ್ದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಡಿ.ಕೆ.ಶಿವಕುಮಾರ್ ಅಭಿಮಾನಿಯೊಬ್ಬರ ಪ್ರಶ್ನೆಗೆ ದೈವ, ಈಗಾಗಲೇ ಭವಿಷ್ಯ ನುಡಿದು ಆಗಿದೆ. ಡಿಕೆ ಶಿವಕುಮಾರ್ ಅವರ ಸದ್ಯದಲ್ಲೇ ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದು ಹೇಳಿದೆ.
ಇನ್ನು ಕೆಲವು ವಿಚಾರ ಈಗಾಗಲೇ ಅವರಿಗೆ ತಿಳಿಸಿದೆ. ಅದರಂತೆ ನಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಅದಷ್ಟು ಬೇಗ ಸಿಎಂ ಸ್ಥಾನಕ್ಕೆ ಡಿಕೆಶಿ ಏರಲಿದ್ದಾರೆ ಎಂದು ಉತ್ತರಿಸಿದೆ. ಸದ್ಯ ದೈವದ ನುಡಿಗೆ ಅಭಿಮಾನಿಗಳು ಪುಲ್ ಖುಷ್ ಆಗಿದ್ದಾರೆ.
