10
Udupi: ಮಟ್ಕಾ ಚೀಟಿ ಬರೆಯುತ್ತಿದ್ದ ಆರೋಪಿ ವಿಠಲ ದೇವಾಡಿಗನನ್ನು ಶನಿವಾರ ಕುರ್ಕಾಲು ಗ್ರಾಮದ ಶಂಕರಪುರದ ಅಶ್ವತಕಟ್ಟೆ ಬಸ್ ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದರು.
ಬಂಧಿತ ಆರೋಪಿ ವಿಠಲ ದೇವಾಡಿಗನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಜೂಜಾಟದ ಬುಕ್ಕಿ ಉಡುಪಿಯ ಲಿಯೋ ಕರ್ನೆಲಿಯೋ ಅವರು ಸೂಚಿಸಿದಂತೆ ನಾನು ಕಾನೂನು ಬಾಹಿರವಾಗಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರನ್ನು ನಂಬಿಸಿ ಮೋಸ ಮಾಡಿ ಅವರಿಂದ ಹಣ ಸಂಗ್ರಹ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.
