Home » Boys missing: ಇಬ್ಬರು ಬಾಲಕರು ಕಾಣೆ – ಮಕ್ಕಳನ್ನು ಹುಡುಕಿಕೊಡಲು ನೊಂದ ಪೋಷಕರ ಮನವಿ

Boys missing: ಇಬ್ಬರು ಬಾಲಕರು ಕಾಣೆ – ಮಕ್ಕಳನ್ನು ಹುಡುಕಿಕೊಡಲು ನೊಂದ ಪೋಷಕರ ಮನವಿ

0 comments

Boys missing: ಮಡಿಕೇರಿ ತಾಲೂಕಿನ ಮೂರ್ನಾಡು ಕೋಡಂಬೂರು ಗ್ರಾಮದ ಯೋಗೇಶ್ ಎಂಬುವರ ಮಗ “ಧನುಷ್”(15 ವರ್ಷ) ಹತ್ತನೇ ತರಗತಿ MHS ಶಾಲೆ ಮೂರ್ನಾಡ್ ಹಾಗೂ ಬಿಪಿನ್ ಎಂಬುವರ ಮಗ “ದ್ರೋಣ”(14ವರ್ಷ) 9ನೇ ತರಗತಿ ಜ್ಞಾನ ಜ್ಯೋತಿ ಶಾಲೆ ಮೂರ್ನಾಡ್, ಈ ಇಬ್ಬರು ಮಕ್ಕಳು ಮೇ27ರಂದು ಮಧ್ಯಾಹ್ನ ಮೂರು ಗಂಟೆ ಸಮಯಕ್ಕೆ ಅದೇ ಗ್ರಾಮದಲ್ಲಿ ಇರುವ ಶ್ರೀ ಭದ್ರಕಾಲಿ ದೇವಾಲಯಕ್ಕೆ ಹೋಗಿಬರುತೇವೆ ಎಂದು ಹೋದವರು ಮರಳಿ ಮನೆಗೆ ಬಂದಿರುವುದಿಲ್ಲ.

ಮೇಲ್ಕಂಡ ಫೋಟೋದಲ್ಲಿ ಕಾಣುವ ಮಕ್ಕಳನ್ನು ಯಾರಾದರೂ ನೋಡಿದಲ್ಲಿ ತಕ್ಷಣ ಮೂರ್ನಾಡು ಪೊಲೀಸ್ ಠಾಣೆ ಅಥವಾ ಮಡಿಕೇರಿಯ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿ. ಮಕ್ಕಳನ್ನು ಹುಡುಕಿ ಕೊಡಲು ನೊಂದ ಪೋಷಕರು ಮನವಿ ಮಾಡಿಕೊಂಡಿದ್ದಾರೆ.

You may also like