Home » New Delhi: ಒಂದೇ ಕುಟುಂಬದ ಇಬ್ಬರ ಮಕ್ಕಳು ನಾಪತ್ತೆ!! ಮನೆಯಲ್ಲೇ ಇದ್ದ ಮರದ ಪೆಟ್ಟಿಗೆಯೊಳಗೆ ಶವವಾಗಿ ಪತ್ತೆ!!

New Delhi: ಒಂದೇ ಕುಟುಂಬದ ಇಬ್ಬರ ಮಕ್ಕಳು ನಾಪತ್ತೆ!! ಮನೆಯಲ್ಲೇ ಇದ್ದ ಮರದ ಪೆಟ್ಟಿಗೆಯೊಳಗೆ ಶವವಾಗಿ ಪತ್ತೆ!!

by ಹೊಸಕನ್ನಡ
0 comments
New Delhi

New Delhi: ಇತ್ತೀಚಿನ ದಿನಗಳಲ್ಲಂತೂ ಮಕ್ಕಳು ಕಾಣೆಯಾಗುವಂತಹ, ನಂತರ ಶವವಾಗಿ ಪತ್ತೆಯಾಗುವಂತಹ ಪ್ರಕರಣಗಳು ವಿಪರೀತವಾಗಿ ಬೆಳಕಿಗೆ ಬರುತ್ತಿವೆ. ಅಂತೆಯೇ ಇದೀಗ ಸದ್ಯ ಇಂತದ್ದೇ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದ್ದು, ನಾಪತ್ತೆಯಾಗಿದ್ದ ಇಬ್ಬರು ಮಕ್ಕಳು ಮನೆಯಲ್ಲೇ ಇದ್ದ ಮರದ ಪೆಟ್ಟಿಗೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ.

ಹೌದು, ನವದೆಹಲಿ (New Delhi) ಜಾಮಿಯಾ ನಗರ (Jamia Nagar) ಮೂಲದ ನೀರಜ್ (8) ಮತ್ತು ಆರತಿ (6) ಎಂಬ ಇಬ್ಬರು ಮಕ್ಕಳು (Children) ನಾಪತ್ತೆಯಾದ ಕೆಲವೇ ಗಂಟೆಗಳ ಬಳಿಕ ಮನೆಯಲ್ಲೇ ಇದ್ದ ಮರದ ಪೆಟ್ಟಿಗೆಯೊಳಗೆ (Wooden Box) ಶವವಾಗಿ ಪತ್ತೆಯಾದ ಘಟನೆಯೊಂದು ಬೆಳಕಿಗೆ ಬಂದಿದೆ.

ಮಂಗಳವಾರ ಮಧ್ಯಾಹ್ನ ಮಕ್ಕಳು ತಮ್ಮ ಪೋಷಕರೊಂದಿಗೆ ಸುಮಾರು 3 ಗಂಟೆ ವೇಳಗೆ ಊಟ ಮುಗಿಸಿದ್ದು, 3:30ರ ವೇಳೆಗೆ ನಾಪತ್ತೆಯಾಗಿದ್ದಾರೆ. ಸ್ಥಳೀಯರು ಹಾಗೂ ಇತರ ಮಕ್ಕಳು ಅವರಿಬ್ಬರನ್ನೂ ಹುಡುಕಿದಾಗ ಮನೆಯಲ್ಲಿ ಇದ್ದ ಮರದ ಪೆಟ್ಟಿಗೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ

ಅಂದಹಾಗೆ ಇವರಿಬ್ಬರೂ ಸಹೋದರ – ಸಹೋದರಿಯಾಗಿದ್ದು,(Brothers and sister) ಅದೇ ಮನೆಯಲ್ಲಿ ವಾಚ್‌ಮ್ಯಾನ್(Watch man)ಆಗಿ ಕೆಲಸ ಮಾಡುತ್ತಿದ್ದ ತಮ್ಮ ತಂದೆ ಬಲ್ಬೀರ್ ಅವರೊಂದಿಗೆ ವಾಸಿಸುತ್ತಿದ್ದರು. ಮಕ್ಕಳಿಬ್ಬರೂ ಆಟವಾಡುತ್ತಾ ಪೆಟ್ಟಿಗೆಯೊಳಗೆ ಸೇರಿಕೊಂಡು ಬಳಿಕ ಹೊರಬರಲು ಸಾಧ್ಯವಾಗದೆ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ.

You may also like

Leave a Comment