Home » ತನ್ನಿಬ್ಬರು ಕಂದಮ್ಮಗಳನ್ನು ಬಿಟ್ಟು ಆತ್ಮಹತ್ಯೆಗೈದ ತಾಯಿ | ಶವದ ಮುಂದೆ ತಬ್ಬಲಿ ಮಕ್ಕಳ ರೋದನೆ

ತನ್ನಿಬ್ಬರು ಕಂದಮ್ಮಗಳನ್ನು ಬಿಟ್ಟು ಆತ್ಮಹತ್ಯೆಗೈದ ತಾಯಿ | ಶವದ ಮುಂದೆ ತಬ್ಬಲಿ ಮಕ್ಕಳ ರೋದನೆ

0 comments

ಮಂಡ್ಯ : ತನ್ನಿಬ್ಬರು ಮಕ್ಕಳನ್ನು ಬಿಟ್ಟು ಮಹಿಳೆಯೋರ್ವರು ಮಗುವಿನ ಜೋಕಾಲಿಯ ಹಗ್ಗಕ್ಕೆ ಕೊರಳೊಡ್ಡಿ ಆತ್ಮಹತ್ಯೆಗೈದ ಘಟನೆ ಜಿಲ್ಲೆಯ ಕೆಂಪೇಗೌಡ ಬಡಾವಣೆಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರು ಕವಿತಾ(36 ವ.)ಎಂದು ತಿಳಿದು ಬಂದಿದೆ.

ಮೃತ ಕವಿತಾ ಡೆತ್‌ನೋಟ್‌ ಬರೆದಿಟ್ಟಿದ್ದು, ʻನನ್ನ ಕೊನೆಯ ದಿನ. ಎಲ್ಲಾ ಆಭರಣಗಳು ನನ್ನ ಮಗ ಮಗಳಿಗೆ ಸೇರಬೇಕು ಇಲ್ಲವಾದ್ರೆ ನಾನು ಹಾಗೂ ನನ್ನ ದೇವರು ನಿಮ್ಮನ್ನು ಕ್ಷಮಿಸುವುದಿಲ್ಲವೆಂದು’ ಬರೆದಿದ್ದಾರೆ.

ತಾಯಿಯು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿ ಮಗುವು ಜೋರಾಗಿ ಅಳುತ್ತಿತ್ತು, ಇದರಿಂದ ಸ್ಥಳೀಯರು ಕಿಟಕಿಯಲ್ಲಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಬ್ಬಲಿ ಕಂದಮ್ಮಗಳು ಶವದ ಮುಂದೆ ಅಳುತಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.

ದೈಹಿಕ ಶಿಕ್ಷಕರಾಗಿರುವ ರವಿಕುಮಾರ್ ರೊಂದಿಗೆ ಕವಿತಾಅವರಿಗೆ ಕಳೆದ 9 ವರ್ಷದ ಹಿಂದೆ ಮದುವೆಯಾಗಿದ್ದರು.ದಂಪತಿಗಳಿಗೆ 7 ವರ್ಷದ ಗಂಡು ಮಗು, 1 ವರ್ಷದ ಹೆಣ್ಣುಮಗುವಿದೆ. ನಿನ್ನೆ ಬೆಳಗ್ಗೆ ರವಿಕುಮಾರ್ ಶಾಲೆಗೆ ತೆರಳಿದ್ದಬಳಿಕ ಮನೆಯಲ್ಲಿ ಕವಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ್ಮಹತ್ಯೆ ಸುದ್ದಿ ಕೇಳಿ ಶಾಲೆಯಿಂದ ಬಂದ ರವಿಕುಮಾರ್ಹಾಗೂ ಸಾವಿನ ಸುದ್ದಿ ಕೇಳಿ ಪೋಷಕರು ಮನೆಗೆಬಂದಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮಂಡ್ಯಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

You may also like

Leave a Comment