Home » Bakrid holiday : ಬಕ್ರಿದ್ ಹಬ್ಬಕ್ಕೆ ಎರಡು ದಿನ ರಜೆ ಘೋಷಣೆ- ಕರ್ನಾಟಕದಲ್ಲಿ ರಜೆ ಯಾವಾಗ?

Bakrid holiday : ಬಕ್ರಿದ್ ಹಬ್ಬಕ್ಕೆ ಎರಡು ದಿನ ರಜೆ ಘೋಷಣೆ- ಕರ್ನಾಟಕದಲ್ಲಿ ರಜೆ ಯಾವಾಗ?

0 comments

Bakrid Holiday : ಮುಸ್ಲಿಮರ ಪ್ರಮುಖ ಹಬ್ಬವಾದ ಬಕ್ರೀದ್ ಹಿನ್ನೆಲೆ ಜೂನ್‌ 6 ಮತ್ತು 7ರಂದು ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ ಎಲ್ಲೆಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಚಂದ್ರದರ್ಶನದ ಆಧಾರದ ಮೇಲೆ ಬಕ್ರೀದ್ ಹಬ್ಬದ ದಿನ ನಿಗದಿಯಾಗುವುದರಿಂದ ರಾಜ್ಯವಾರು ಬದಲಾವಣೆಯಾಗುತ್ತದೆ. ಇದೇ ಕಾರಣಕ್ಕೆ ಕೇರಳದಲ್ಲಿ ಜೂ.6 ರಂದು ಬಕ್ರೀದ್ ಹಬ್ಬವಾಗಿದ್ದು, ಅದೇ ದಿನವನ್ನು ರಜೆಯಾಗಿ ಘೋಷಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಜೂ.7 ಶನಿವಾರದಂದು ಬಕ್ರೀದ್ ಆಚರಣೆಗಾಗಿ ಅಧಿಕೃತ ರಜೆ ಘೋಷಣೆ ಮಾಡಲಾಗಿದೆ.

ಹೌದು, ಬಕ್ರೀದ್ ಹಬ್ಬ ಹಿನ್ನೆಲೆ ಜೂನ್‌ 6ರಂದು ಕೆಲವೆಡೆ ಮಾತ್ರ ಬ್ಯಾಂಕ್‌ಗಳಿಗೆ ರಜೆ ಇರಲಿದ್ದು, ಜೂನ್‌ 7ರಂದು ದೇಶದ ಬಹುತೇಕ ರಾಜ್ಯಗಳಲ್ಲಿ ರಜೆ ಇರಲಿದೆ. ಮಾಹಿತಿಯ ಪ್ರಕಾರ, ಜೂನ್‌ 7ರಂದು ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಬ್ಯಾಂಕ್‌, ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಇರಲಿದೆ.

You may also like