Home » ಎರಡೂ ಕೈಗಳಿಂದ ಬರೆದು ಜಾಹ್ನವಿ ರಾಮ್ತೇಕರ್ ವಿಶ್ವ ದಾಖಲೆ

ಎರಡೂ ಕೈಗಳಿಂದ ಬರೆದು ಜಾಹ್ನವಿ ರಾಮ್ತೇಕರ್ ವಿಶ್ವ ದಾಖಲೆ

by Praveen Chennavara
4 comments

ನಮ್ಮ ದೇಶದಲ್ಲಿ ಪ್ರತಿಭೆಗಳಿಗೇನು ಕಮ್ಮಿಯಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯ ಪ್ರತಿಭೆಯನ್ನು ಮೈಗೂಡಿಸಿಕೊಂಡಿರುತ್ತಾರೆ. ಒಂದು ಕೈಯಲ್ಲಿ ಬರೆಯುವುದೇ ಕಷ್ಟವಿರುವಾಗ ಇಲ್ಲೊಬ್ಬಳು ಏಕಕಾಲದಲ್ಲಿ ತನ್ನೆರಡು ಕೈಗಳಲ್ಲಿ ಬರೆದು ವಿಶ್ವದಾಖಲೆ ನಿರ್ಮಿಸಿದ್ದಾಳೆ.

ಈ ವಿಶ್ವ ದಾಖಲೆ ನಿರ್ಮಿಸಿರುವುದು ಮಧ್ಯಪ್ರದೇಶದ ಜಬಲ್ಪುರದ ಯುವತಿ ಜಾಹ್ನವಿ ರಾಮ್ತೇಕರ್. ಈಕೆ ವಿಶ್ವ ದಾಖಲೆಯ ಜತೆಗೆ ಹಾರ್ವರ್ಡ್ ವರ್ಲ್ಡ್ ರೆಕಾರ್ಡ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

ನವದೆಹಲಿಯ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಅವರು ಮಾಡುತ್ತಿದ್ದಾರೆ. ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮಯದಲ್ಲಿ ಅನಾರೋಗ್ಯದಿಂದಾಗಿ ಬಲಗೈನಲ್ಲಿ ಬರೆಯುವುದು ಆಕೆಗೆ ಸಾಧ್ಯವಾಗುತ್ತಿರಲಿಲ್ಲವಂತೆ.

ಆದರೆ ಪರೀಕ್ಷೆ ಹತ್ತಿರವಿದ್ದ ಹಿನ್ನೆಲೆಯಲ್ಲಿ ಆಕೆ ಎಡಗೈನಲ್ಲೇ ಬರೆಯುವುದನ್ನು ಅಭ್ಯಾಸ ಮಾಡಿ, ಪರೀಕ್ಷೆ ಬರೆದು ಪಾಸ್ ಆಗಿದ್ದರು. ನಂತರ ಎರಡೂ ಕೈಯಲ್ಲಿ ಬರೆಯುವುದನ್ನು ಅಭ್ಯಾಸ ಮಾಡಿದ್ದಾರೆ. ಕೇವಲ ಬರೆಯುವುದು ಮಾತ್ರವಲ್ಲದೆ ಎರಡೂ ಕೈಗಳಲ್ಲಿ ಚಿತ್ರವನ್ನೂ ಬಿಡಿಸುವ ಹಿಡಿತ ಅವರಿಗೆ ಇದೆ. ಇತ್ತೀಚೆಗೆ 1 ನಿಮಿಷದಲ್ಲಿ ಎರಡೂ ಕೈಗಳಲ್ಲಿ ಏಕಕಾಲದಲ್ಲಿ ಒಟ್ಟು 36 ಸಹಿ ಹಾಕಿದ್ದು, ಅದು ಹಾರ್ವರ್ಡ್ ವರ್ಲ್ಡ್ ರೆಕಾರ್ಡ್ ಆಗಿದೆ.

You may also like

Leave a Comment