Home » Rashmika Mandanna: ರಶ್ಮಿಕಾ ನಟನೆಯ ಈ ಎರಡು ಸಿನಿಮಾಗಳು ಒಂದೇ ದಿನ ರಿಲೀಸ್! ಬಿಗ್ ಬಜೆಟ್ ನ ಸಿನಿಮಾಗಳು ಇದೇ ನೋಡಿ!

Rashmika Mandanna: ರಶ್ಮಿಕಾ ನಟನೆಯ ಈ ಎರಡು ಸಿನಿಮಾಗಳು ಒಂದೇ ದಿನ ರಿಲೀಸ್! ಬಿಗ್ ಬಜೆಟ್ ನ ಸಿನಿಮಾಗಳು ಇದೇ ನೋಡಿ!

0 comments
Rashmika Mandanna

Rashmika Mandanna: ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika mandanna) ಕಿರಿಕ್ ಪಾರ್ಟಿ (kirik party) ಚಿತ್ರದ (film ) ಮೂಲಕ ದೊಡ್ಡ ಅಭಿಮಾನಿಗಳ ಬಳಗವನ್ನೇ ಸಂಪಾದಿಸಿದ್ದಾರೆ. ಇನ್ನು ನ್ಯಾಷನಲ್ ಕ್ರಶ್ ಅಂತಲೇ ಕರೆಯಲ್ಪಡುವ ಈಕೆ ಪ್ರಸ್ತುತ ಬಾಲಿವುಡ್, ಟಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲಿ ಫುಲ್ ಮಿಂಚುತ್ತಿದ್ದಾರೆ. ಹೌದು, ರಶ್ಮಿಕಾ ಮಂದಣ್ಣ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

School Holidays: ಶಾಲಾ ಮಕ್ಕಳಿಗೆ 82 ದಿನ ರಜೆ! ಸಾಲು ಸಾಲು ರಜೆಗಳಿಗೆ ಕಾರಣ ಇಲ್ಲಿದೆ

ಸದ್ಯಕ್ಕೆ ರಶ್ಮಿಕಾ ಹೊಸ ಸಿನಿಮಾ ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಅಲ್ಲು ಅರ್ಜುನ್ ಜೊತೆ ಅವರು ನಟಿಸುತ್ತಿರುವ ‘ಪುಷ್ಪ 2’ ಸಿನಿಮಾ ಬಗ್ಗೆ ಇಟ್ಟಿರುವ ಅಭಿಮಾನಿಗಳ ಭರ್ಜರಿ ನಿರೀಕ್ಷೆಗೆ ಇದೀಗ ಉತ್ತರ ಸಿಕ್ಕಿದೆ. ಅದೇ ರೀತಿ ಅವರು ‘ಛವಾ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಒಂದೇ ದಿನ ರಶ್ಮಿಕಾ ಅವರ ಈ ಎರಡು ಸಿನಿಮಾಗಳು ರಿಲೀಸ್ ಆಗೋ ಸಾಧ್ಯತೆ ಇದೆ ಎನ್ನಲಾಗಿದೆ.

ಹೌದು, ಈಗಾಗಲೇ ‘ಪುಷ್ಪ 2’ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗಬೇಕಿತ್ತು. ಆದರೆ, ಈಗ ಸಿನಿಮಾನ ಡಿಸೆಂಬರ್ 6ರಂದು ರಿಲೀಸ್ ಮಾಡೋದಾಗಿ ಘೋಷಣೆ ಮಾಡಲಾಗಿದೆ. ಅದೇ ರೀತಿ ರಶ್ಮಿಕಾ ನಟನೆಯ ‘ಛವಾ’ ಕೂಡ ಡಿಸೆಂಬರ್ 6ಕ್ಕೆ ಬಿಡುಗಡೆ ಕಾಣಲಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ಛತ್ರಪತಿ ಶಿವಾಜಿ ಅವರ ಮಗ ಸಂಭಾಜಿ ಬಗ್ಗೆ ಇದೆ.

‘ಛವಾ’ ಈ ಮೊದಲೇ ಡಿಸೆಂಬರ್ 6ರಂದು ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಆದ್ರೆ ‘ಪುಷ್ಪ 2’ ಘೋಷಣೆ ಆದ ಬಳಿಕ ಈ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಬಹುದು ಎಂಬ ಊಹೆ ಈಗ ತಪ್ಪಾಗಿದೆ. ಸದ್ಯ ಈ ಚಿತ್ರ ಕೂಡ ಡಿಸೆಂಬರ್ 6ರಂದು ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ಆಗಸ್ಟ್ 15ರಂದು ಸಿನಿಮಾದ ಮೊದಲ ಗ್ಲಿಂಪ್ಸ್ ರಿಲೀಸ್ ಆಗಲಿದೆ. ಇನ್ನು ‘ಸ್ತ್ರೀ 2’ ಸಿನಿಮಾ ಆಗಸ್ಟ್ 15ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಜೊತೆ ‘ಛವಾ’ ಸಿನಿಮಾದ ಗ್ಲಿಂಪ್ಸ್ ಅಟ್ಯಾಚ್ ಆಗಿ ಪ್ರಸಾರ ಆಗಲಿದೆ.

Budget 2024: ಹಣಕಾಸು ವರ್ಷ ಇರೋದು ಏ. 1 ರಿಂದ ಮಾ. 31 ರ ವರೆಗೆ, ಹಾಗಿದ್ರೆ ನಿನ್ನೆ ಸಚಿವೆ ನಿರ್ಮಲಾ ಮಂಡಿಸಿದ ಬಜೆಟ್ ಯಾವಾಗಿಂದ ಜಾರಿ ಆಗುತ್ತೆ, ಎಲ್ಲಿವರೆಗೂ ಇರುತ್ತೆ?

You may also like

Leave a Comment