ಶ್ರೀನಗರ: ಜಮ್ಮು ಕಾಶ್ಮೀರದ ರಜೌರಿಯಲ್ಲಿ ಇಬ್ಬರು ಭಯೋದ್ಪಾದಕರು ಸೇನಾ ನೆಲೆಯ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದು ಈ ವೇಳೆ ಮೂವರು ಯೋಧರು ಹುತಾತ್ಮರಾಗಿದ್ದಾರೆ. ದಾಳಿ ನಡೆಸಿದ ಭಯೋದ್ಪಾದಕರನ್ನು ಸೇನೆ ಹತ್ಯೆ ಮಾಡಿದೆ.
ರಾಜೌರಿಯಿಂದ 25 ಕಿ.ಮೀ ದೂರದಲ್ಲಿ ಇಬ್ಬರು ಭಯೋತ್ಪಾದಕರು ಆರ್ಮಿ ಕಂಪನಿ ಕಾರ್ಯಾಚರಣಾ ನೆಲೆಯ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದಾರೆ. ಇಬ್ಬರೂ ಭಯೋತ್ಪಾದಕರು ಹತರಾಗಿದ್ದಾರೆ. ಈ ವೇಳೆ ಮೂವರು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಭಾರತೀಯ ಸೇನೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಭಯೋತ್ಪಾದಕರು, ಈ ವೇಳೆ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
J&K | In a terrorist attack 25 kms from Rajouri, two terrorists carried out a suicide attack on an Army company operating base. Both terrorists killed while 3 soldiers lost their lives. Operations in progress.
In a terrorist attack 25 km from Rajouri, two terrorists carried out a suicide attack on an Army company operating base. Both terrorists have been killed while three own troops have lost their lives. Operations in progress: Indian Army officials pic.twitter.com/57coXZTa6j