2
Ankola: ಅಪ್ಪನೊಂದಿಗೆ ಕೊಟ್ಟಿಗೆಗೆ ಹೋದಂತಹ ಎರಡು ವರ್ಷದ ಮಗು ಗೊಬ್ಬರದ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಅಂಕೋಲಾ ಹಳುವಳ್ಳಿಯಲ್ಲಿ ನಡೆದಿದೆ.
ಅಪ್ಪನೊಂದಿಗೆ ದನದ ಕೊಟ್ಟಿಗೆ ಹೋದಂತಹ ಎರಡು ವರ್ಷದ ಸಾನ್ವಿ ಆಟವಾಡುತ್ತಾ ಗೊಬ್ಬರದ ಗುಂಡಿಗೆ ಬಿದ್ದು ಹೋಗಿದ್ದಾಳೆ, ಮಳೆಗಾಲವಾದುದರಿಂದ ಗೊಬ್ಬರದ ಗುಂಡಿಯಲ್ಲಿ ನೀರು ತುಂಬಿರುತ್ತದೆ. ಕೆಲಸದ ಮಧ್ಯೆ ಬ್ಯುಸಿಯಾಗಿದ್ದ ತಂದೆ, ಆನಂತರ ನೋಡಿದಾಗ ಆಸ್ಪತ್ರೆಗೆ ದಾಖಲು ಮಾಡುವ ಪ್ರಯತ್ನ ಮಾಡಿದರು ಕೂಡ ಮಗು ಸಾವನ್ನಪ್ಪಿದ್ದಾಳೆ.
ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಷಕರ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
