Home » Gokarna: ಗೋಕರ್ಣ ಬೀಚಲ್ಲಿ ಮುಳುಗಿ ಬೆಂಗಳೂರಿನ ಇಬ್ಬರು ಯುವಕರು ಸಾವು !!

Gokarna: ಗೋಕರ್ಣ ಬೀಚಲ್ಲಿ ಮುಳುಗಿ ಬೆಂಗಳೂರಿನ ಇಬ್ಬರು ಯುವಕರು ಸಾವು !!

0 comments

Gokarna : ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದ 8 ಜನರಲ್ಲಿ ಇಬ್ಬರು ಈಜಲು ತೆರಳಿ ಮೃತಪಟ್ಟ ಘಟನೆ ನ.28ರ ಗುರುವಾರ ನಡೆದಿದೆ.

ಹೌದು, ಸಂಜೆ ಮಿಡ್ಲ್ ಬೀಚ್‌ನಲ್ಲಿ (ಗಂಗಾವಳಿ- ಗೋಕರ್ಣ ಮಧ್ಯದಲ್ಲಿ) ಬೆಂಗಳೂರಿನಿಂದ ಗೋಕರ್ಣಕ್ಕೆ(Gokarna) ಪ್ರವಾಸಕ್ಕೆ ಬಂದಿದ್ದ 8 ಜನರಲ್ಲಿ ಇಬ್ಬರು ಈಜಲು ತೆರಳಿ ಮೃತಪಟ್ಟಿದ್ದಾರೆ. ಬೆಂಗಳೂರು ವಿಜಯನಗರ ನಿವಾಸಿಗಳಾದ ಪ್ರತೀಕ ಪಾಲಾಕ್ಷಪ್ಪ (32), ರವಿ ನಾಗರಾಜ (26) ಮೃತ ದುರ್ದೈವಿಗಳು.

ಗುರುವಾರ, ಶುಕ್ರವಾರ ಕಚೇರಿಗೆ ರಜೆ, ಶನಿವಾರ, ಭಾನುವಾರ ಸರ್ಕಾರಿ ರಜೆ ಇರುವುದರಿಂದ ನಾಲ್ಕು ದಿನದ ರಜೆ ನಿಮಿತ್ತ 8 ಗೆಳೆಯರು ಗೋಕರ್ಣಕ್ಕೆ ಗುರುವಾರ ಬೆಳಗ್ಗೆ ಆಗಮಿಸಿದ್ದರು. ಪ್ರಕೃತಿ ರೆಸಾರ್ಟ್‌ನಲ್ಲಿ ರೂಮ್‌ ಮಾಡಿಕೊಂಡಿದ್ದ 8 ಜನರ ಪೈಕಿ ಐದು ಜನ ಈಜಾಡಲು ತೆರಳಿದ್ದರು. ಅದರಲ್ಲಿ ಮೂವರು ಸೊಂಟದ ಅಳತೆ ನೀರಿನಲ್ಲಿದ್ದರೆ, ಇನ್ನಿಬ್ಬರು ಈಜಾಡುತ್ತ ಮುಂದೆ ತೆರಳಿದ್ದರು.

ಆದರೆ ಕಡಲ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರು ಪಾಲಾಗಿದ್ದರು. ನಂತರ ಸ್ಥಳದಲ್ಲಿದ್ದ ಗೆಳೆಯರು ಕೂಗಿಕೊಂಡಾಗ ಅಕ್ಕಪಕ್ಕ ದವರು ಬಂದು ಕಾಪಾಡುವಷ್ಟರಲ್ಲಿ ಮೃತಪಟ್ಟಿದ್ದರು. ಸ್ಥಳದಲ್ಲಿದ್ದ ಜೀವ ರಕ್ಷಕ ಸಿಬ್ಬಂದಿ ನೀರಿನಿಂದ ಶವವನ್ನು ಮೇಲಕ್ಕೆ ತಂದಿದ್ದಾರೆ.

You may also like

Leave a Comment