Home » ಉಡುಪಿ : ಕುಡುಕ ಶಿಕ್ಷಕನ ಅವಾಂತರ | ಟೈಟಾಗಿ ಶಾಲೆಯ ಜಗಲಿಯಲ್ಲೇ ನಿದ್ದೆ

ಉಡುಪಿ : ಕುಡುಕ ಶಿಕ್ಷಕನ ಅವಾಂತರ | ಟೈಟಾಗಿ ಶಾಲೆಯ ಜಗಲಿಯಲ್ಲೇ ನಿದ್ದೆ

0 comments

ಉಡುಪಿ: ಇಲ್ಲಿನ ಶಾಲೆಯೊಂದರ ಶಿಕ್ಷಕನೋರ್ವ ಬೆಳ್ಳಂಬೆಳಗ್ಗೆ ಕಂಠಪೂರ್ತಿ ಕುಡಿದು ಶಾಲೆಯ ಜಗಲಿಯಲ್ಲಿ ಮಲಗಿದ್ದು, ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಂಠಪೂರ್ತಿ ಕುಡಿದು ಶಾಲೆಯ ಜಗಲಿಯ ಮೇಲೆ ಮಲಗಿದಾತ‌ ಇಲ್ಲಿನ ಪೆರ್ಡೂರು ಗ್ರಾಮದ ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣಮೂರ್ತಿ ಎಂದು ಹೇಳಲಾಗಿದೆ. ಬೆಳ್ಳಂಬೆಳಗ್ಗೆ ಕುಡಿದು ಶಾಲೆಗೆ ಬಂದ ಶಿಕ್ಷಕ ನೆತ್ತಿಗೇರಿದ ನಶೆಯಲ್ಲಿ ಜಗಲಿಯಲ್ಲೇ ಮಲಗಿದ್ದಾನೆ. ಸುತ್ತಮುತ್ತಲಿನ ಅರಿವಿಲ್ಲದೆ, ಹಾಯಾಗಿ ನಿದ್ರೆಗೆ ಜಾರಿದ್ದಾನೆ. ಇದನ್ನು ಕಂಡವರು ಶಿಕ್ಷಕನ ಈ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆಯ ಮಕ್ಕಳ ಭವಿಷ್ಯವನ್ನು ರೂಪಿಸಬೇಕಾದ, ಮಕ್ಕಳಿಗೆ ಮಾರ್ಗದರ್ಶನ ನೀಡಬೇಕಾದ ಶಿಕ್ಷಕನೇ ಈ ರೀತಿಯಾಗಿ ವರ್ತಿಸಿದರೇ ಹೇಗೇ ಎಂದು ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಹಾಗೂ ಶಿಕ್ಷಕನಾದ ಕೃಷ್ಣಮೂರ್ತಿ ಅವರನ್ನು ಕೂಡಲೇ ಅಮಾನತು ಮಾಡುವಂತೆ ಪೆರ್ಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವು ಪೂಜಾರಿ, ಉಪಾಧ್ಯಕ್ಷೆ ಚೇತನಾ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ. ತುಕಾರಾಮ ನಾಯಕ್ ರಮೇಶ್ ಪೂಜಾರಿ ಶಾಲಾಭಿವೃದ್ಧಿ ಸಮಿತಿ, ಬೈದಷ್ರಿ ಫ್ರೆಂಡ್ಸ್ ನ ಸತೀಶ್, ಗ್ರಾಮಸ್ಥರು ಹಾಗೂ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಮನವಿ ಸಲ್ಲಿಸಿದ್ದಾರೆ.

You may also like

Leave a Comment