Home » Udupi: ಉಡುಪಿ: ದೇವರಬಾಳಿನಲ್ಲಿ ವಿಶೇಷವಾದ ವಾಮನಮುದ್ರೆ ಶಿಲಾ ಶಾಸನ ಪತ್ತೆ!

Udupi: ಉಡುಪಿ: ದೇವರಬಾಳಿನಲ್ಲಿ ವಿಶೇಷವಾದ ವಾಮನಮುದ್ರೆ ಶಿಲಾ ಶಾಸನ ಪತ್ತೆ!

0 comments

Udupi: ಉಡುಪಿ (Udupi) ಜಿಲ್ಲೆಯ, ಬೈಂದೂರ್ ತಾಲೂಕಿನ ಹಳ್ಳಿಹೊಳೆಯ ದೇವರಬಾಳಿನಲ್ಲಿ ಈ ವಿಶೇಷ ಶಾಸನವು ಕಂಡುಬಂದಿದೆ. ಜಟ್ಟಿಗೇಶ್ವರನೆಂದು ಇಲ್ಲಿನ ರಾಘವೇಂದ್ರ ಚಾತ್ರರ ಕುಟುಂಬ ಈ ಶಾಸನವನ್ನು ಪೂಜಿಸುತ್ತಾ ಬಂದಿದ್ದು, ಸುಮಾರು 20 ವರ್ಷಗಳ ಹಿಂದೆ ಶಾಸಕ್ಕೊಂದು ಗುಡಿಯನ್ನೂ ನಿರ್ಮಾಣ ಮಾಡಿದ್ದಾರೆ.

ಈ ಶಾಸನದ ಮಾಹಿತಿಯನ್ನು ಕಲೆ ಹಾಕಿದ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರದೀಪ್ ಯಡಿಯಾಳ ಅವರು ಸ್ಥಳಕ್ಕೆ ತೆರಳಿದ್ದಾರೆ. ಜಟ್ಟಿಗೇಶ್ವರನಾಗಿ ಪೂಜೆ ಮಾಡುವ ಹಿನ್ನಲೆಯಲ್ಲಿ ಫೋಟೋಗಳನ್ನು ತೆಗೆಯಲು ಮಾತ್ರ ಕುಟುಂಬದವರು ಅವಕಾಶ ನೀಡಿದ್ದಾರೆ. ಇದು ಸುಮಾರು ಮೂರು ಕಾಲು ಅಡಿ ಎತ್ತರ ಎರಡು ಕಾಲು ಅಡಿ ಅಗಲ ಇದೆಯೆಂದು ಹಾಗೂ ಇದರ ಮಾಹಿತಿ ಪಡೆಯಬೇಕೆನ್ನುವ ಆಸ್ತೆ ಹೊಂದಿ ಫೋಟೋಗಳನ್ನು ತುಮಕೂರು ವಿ.ವಿ ಸಂಶೋಧನಾರ್ಥಿ ವೈಶಾಲಿ ಜಿ. ಆರ್ ಇವರಿಗೆ ನೀಡಿದ್ದಾರೆ.

ಪ್ರೊ. ಎಂ ಕೊಟ್ರೇಶ್, ಅಧ್ಯಕ್ಷರು, DOSR ಇತಿಹಾಸ ಮತ್ತು ಪುರಾತತ್ವ ವಿಭಾಗ ತುಮಕೂರು ವಿಶ್ವವಿದ್ಯಾನಿಲಯ ಇವರು ಇದೊಂದು ವಾಮನ ಮುದ್ರೆ ಶಾಸನವಾಗಿದ್ದು, ಶಾಸನದ ಬಲ ಭಾಗದಲ್ಲಿ ಸೂರ್ಯ, ಕರುವಿಗೆ ಹಾಲುಣಿಸುತ್ತಿರುವ ಗೋವು, ಒಬ್ಬ ವ್ಯಕ್ತಿಯ ಚಿತ್ರ ಕೆತ್ತಲ್ಪಟ್ಟಿದೆ, ಶಾಸನದ ಮಧ್ಯಭಾಗದಲ್ಲಿ ವಾಮನನ ಕೆತ್ತನೆ, ಎಡ ಭಾಗದಲ್ಲಿ ಚಂದ್ರನ ಕೆತ್ತನೆ ಹಾಗೂ ಅದರ ಕೆಳಭಾಗ ದೀಪದ ಕಂಭದ ಕೆತ್ತನೆ ಇದೆ.22 ಸಾಲುಗಳು ಮೇಲ್ಭಾಗದಲ್ಲಿ ಕಾಣಿಸುತ್ತಿದೆ. ಸಿಮೆಂಟ್ ನಿಂದ ಶಾಸನ ಕಟ್ಟಸಿದ್ದರಿಂದ ಉಳಿದ ಸಾಲುಗಳು ಕಾಣಿಸುವುದಿಲ್ಲ. ಇದು ನಂದಿನಾಗರಿ ಲಿಪಿಯಲ್ಲಿದ್ದು ಮೇಲ್ನೋಟಕ್ಕೆ ವಿಜಯನಗರ ಕಾಲದ ಶಾಸನವಾಗಿ ಕಂಡುಬಂದಿದೆ. ಹಾಗೂ ವೈಷ್ಣವರಿಗೆ ದಾನ ನೀಡಿದ ಶಾಸನವಾಗಿ ಕಂಡು ಬಂದಿದೆ.

You may also like