ಉಡುಪಿ: ಶಕ್ತಿ ಯೋಜನೆ ರೀತಿಯ ಉಚಿತ ಪ್ರಯಾಣ ಆಫರ್ ಘೋಷಣೆಯಾಗಿದೆ; ಹೊಸವರ್ಷ ತನಕ ಆಟೋ ರೈಡ್ ಫ್ರೀ ಕಂಪ್ಲೀಟ್ ಫ್ರೀ!!
ಹೌದು, ಮಾಂಗೋರೈಡ್ ಉಡುಪಿಯ ತನ್ನ ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದೆ. ಕಳೆದ ವಾರದಿಂದೀಚೆಗೆ ಸಂಚಲನ ಸೃಷ್ಟಿ ಮಾಡಿದ್ದ ಮಾಂಗೋರೈಡ್, ಪೇಟೆಗಳಲ್ಲಿ ಮಾತ್ರ ಸಿಗುತ್ತಿದ್ದ ಆ್ಯಪ್ ಆಧಾರಿತ ಅಟೋ ಕ್ಯಾಬ್ ಸೇವೆಯನ್ನು ಹಳ್ಳಿ ಹಳ್ಳಿಗೂ ವ್ಯಾಪಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಶುರುಮಾಡಿದ ವಿಷಯ ಎಲ್ಲರಿಗೂ ತಿಳಿದೇ ಇದೆ. ಈ ಮಧ್ಯೆ ಮತ್ತೊಂದು ಬಿಗ್ ಗಿಫ್ಟ್ ಅನ್ನು ಮಾಂಗೋರೈಡ್ ಸಂಸ್ಥೆ ಘೋಷಿಸಿದೆ.
ಈಗ ಉಡುಪಿಯಲ್ಲಿ ಮಾಂಗೋರೈಡ್ ಫ್ರೀ ಆಟೋ ಸೇವೆಯನ್ನು ಪ್ರಾರಂಭಿಸಿದೆ. ಇವತ್ತಿನಿಂದ, ಅಂದರೆ ಡಿಸೆಂಬರ್ 15ರಿಂದ ಕ್ರಿಸ್ಮಸ್ ಮುಗಿದು ಹೊಸವರ್ಷ ಶುರುವಾಗುವ ತನಕ ಮಾಂಗೋರೈಡ್ ಉಚಿತ ಆಟೋ ಸೇವೆ ದೊರೆಯಲಿದೆ. ಈ ಉಚಿತ ಸೇವೆ ಸದ್ಯಕ್ಕೆ ಉಡುಪಿಯಲ್ಲಿ ಮಾತ್ರ ಲಭ್ಯವಿದೆ. ಈ ಮೂಲಕ, ಉಡುಪಿ ಮಣಿಪಾಲದ ಪ್ರಯಾಣಿಕರು ಹೊಸವರ್ಷದ ಈ ಹೊಸ್ತಿಲಲ್ಲಿ ಉಚಿತವಾಗಿ ಸಂಚರಿಸಲಿದ್ದಾರೆ.
ಕ್ರಿಸ್ಮಸ್ ಮತ್ತು ಹೊಸವರ್ಷದ ಸಂದರ್ಭ ಮೊದಲೇ ಕಳೆಗಟ್ಟುವ ಉಡುಪಿ ಮಣಿಪಾಲದಲ್ಲಿ ಉಚಿತ ಆಟೋ ಸೇವೆ ಯುವ ಸಮುದಾಯವನ್ನು ಸೆಳೆಯಲಿದೆ.
ಫ್ರೀ ಆಫರ್ ಪಡೆಯೋದು ಸುಲಭ
ಉಡುಪಿ ಜಿಲ್ಲೆಯಲ್ಲಿ ಗ್ರಾಹಕರು ಈಗ free_trip Promo Code ಬಳಸಿ ಉಚಿತವಾಗಿ ಸಿಟಿ ರೈಡ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರಾಹಕ ಸಿಬ್ಬoದಿಯನ್ನು ಸಂಪರ್ಕಿಸಬಹುದು ಎಂದು ಮಾಂಗೋರೈಡ್ ಸಂಸ್ಥೆ ಮಾಹಿತಿ ನೀಡಿದೆ. ಹೆಚ್ಚಿನ ಮಾಹಿತಿಗೆ 8748022728 ನಂಬರ್ ಗೆ ವಾಟ್ಸಾಪ್ ಮಾಡಬಹುದಾಗಿದೆ.
