Home » Udupi (Kaup): ಕಾಪು ಪೊಲೀಸ್‌ ಠಾಣೆಯ ಮಹಿಳಾ ಪೊಲೀಸ್‌ ಆತ್ಮಹತ್ಯೆ ಪ್ರಕರಣ; ಡೈರಿ ಪತ್ತೆ

Udupi (Kaup): ಕಾಪು ಪೊಲೀಸ್‌ ಠಾಣೆಯ ಮಹಿಳಾ ಪೊಲೀಸ್‌ ಆತ್ಮಹತ್ಯೆ ಪ್ರಕರಣ; ಡೈರಿ ಪತ್ತೆ

0 comments
Udupi (Kaup)

Udupi (Kaup): ಕಾಪು ಪೊಲೀಸ್‌ ಠಾಣೆಯ ಮಹಿಳಾ ಪೊಲೀಸ್‌ ಜ್ಯೋತಿ (32) ಆತ್ಮಹತ್ಯೆ ಪ್ರಕರಣಕ್ಕೆ ಕುರಿತಂತೆ ಮಹಿಳೆಯ ಪತಿಯನ್ನು ಇದೀಗ ಬಂಧನ ಮಾಡಲಾಗಿದೆ.

ಇದನ್ನೂ ಓದಿ: LPG Price Cut: ಎಲ್‌ಪಿಜಿ ಸಿಲಿಂಡರ್ ದರ ಅಗ್ಗ; ಎಷ್ಟು? ಇಲ್ಲಿದೆ ವಿವರ

ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡಿದ ಆರೋಪದಡಿ ಕಾಪು ಪೊಲೀಸರು ಮಾ.30 ರ ರಾತ್ರಿ ಈತನನ್ನು ಬಂಧಿಸಿದ್ದಾರೆ.

2017 ರಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್‌ ತಾಲೂಕಿನ ರವಿಕುಮಾರ್‌ (35) ಎಂಬಾತ ಕೆಎಸ್‌ಆರ್‌ಟಿಸಿಯಲ್ಲಿ ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ದ. ಈತ ತನ್ನದೇ ಊರಿನ ಜ್ಯೋತಿಯನ್ನು ಮದುವೆಯಾಗಿದ್ದ. ಜ್ಯೋತಿ ಕಾಪು ಠಾಣೆ ಸಿಬ್ಬಂದಿಯಾಗಿರುವುದರಿಂದ ಇವರಿಬ್ಬರು ಠಾಣೆಯ ಸಮೀಪದಲ್ಲಿ ಇರುವ ಪೊಲೀಸ್‌ ವಸತಿಗೃಹದಲ್ಲಿ ವಾಸವಾಗಿದ್ದರು.

ಇದನ್ನೂ ಓದಿ: Electricity Rate cut: ವಿದ್ಯುತ್‌ ದರ ಇಳಿಕೆ, ಇಂದಿನಿಂದ ಜಾರಿ

ಮಾ.29 ರ ರಾತ್ರಿ ಇವರಿಬ್ಬರ ಮಧ್ಯೆ ಗಲಾಟೆ ನಡೆದಿದೆ. ಈ ವಿಚಾರಕ್ಕೆ ತೀರಾ ನೊಂದುಕೊಂಡ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತ ಜ್ಯೋತಿಯ ಡೈರಿಯೊಂದು ರೂಮಿನಲ್ಲಿ ಪತ್ತೆಯಾಗಿದ್ದು, ಅದರಲ್ಲಿ ಆಕೆ ನನ್ನ ಸಾವಿಗೆ ಪತಿಯ ಅನುಮಾನವೇ ಕಾರಣ ಎಂದು ಬರೆದಿದ್ದಾರೆ. ಇತರ ಕಾರಣಗಳನ್ನೂ ಉಲ್ಲೇಖ ಮಾಡಲಾಗಿದು, ಈ ಕುರಿತು ಪೊಲೀಸರು ಮಾಹಿತಿ ನೀಡಿಲ್ಲ.

ಜ್ಯೋತಿ ಅವರ ತಾಯಿ ದೇವಮ್ಮ ವಿಟ್ಲಾಪುರ ನೀಡಿದ ದೂರಿನ ಪ್ರಕಾರ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment