Home » Udupi: ಆರೋಗ್ಯ ಚೇತರಿಕೆ ನಂತರ ಕಾಪು ಹೊಸಮಾರಿಗುಡಿ ದೇವಸ್ಥಾನಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್‌ ಭೇಟಿ

Udupi: ಆರೋಗ್ಯ ಚೇತರಿಕೆ ನಂತರ ಕಾಪು ಹೊಸಮಾರಿಗುಡಿ ದೇವಸ್ಥಾನಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್‌ ಭೇಟಿ

0 comments
Gruha Lakshmi Scheme

Udupi: ಆರೋಗ್ಯ ಚೇತರಿಕೆಯ ನಂತರ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದ್ದಾರೆ.

“ನಾನು ಕೆಲಸಕ್ಕೆ ಮರಳಿರುವುದು ಸಂತೋಷ ತಂದಿದೆ. ತಾಯಿ ದೇವತೆಯ ಆಶೀರ್ವಾದದ ಜೊತೆಗೆ ಉತ್ತಮ ಆಡಳಿತವನ್ನು ನೀಡಲು ದೃಢಸಂಕಲ್ಪದಿಂದ ಹೊಸದಾಗಿ ಪ್ರಾರಂಭಿಸುತ್ತಿದ್ದೇನೆ. ಈ ದೇವಸ್ಥಾನದ ಪರಿಕಲ್ಪನೆ ಮತ್ತು ಇತಿಹಾಸವು ನನ್ನನ್ನು ಬೆರಗುಗೊಳಿಸಿತು. ಭಕ್ತರ ಸಹಕಾರದಿಂದ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎನ್ನುವುದು ತಿಳಿಯಿತು. ಚಿನ್ನದ ಸಿಂಹಾಸನದ ಮೇಲೆ ದೇವತೆ ಕುಳಿತಿರುವುದನ್ನು ನೋಡಿದರೆ ಭಾರತೀಯ ಸಂಸ್ಕೃತಿಯ ಶ್ರೀಮಂತಿಗೆ ಅರಿವಾಗುತ್ತದೆʼ ಎಂದು ಪ್ರಾರ್ಥನೆ ಮುಗಿಸಿದ ನಂತರ ಮಾಧ್ಯಮದವರೊಂದಿಗೆ ಹೇಳಿದರು.

You may also like