Home » Udupi: ಉಡುಪಿ ಡಿಸಿ ಮುಂದೆ ನಕ್ಸಲ್ ಲಕ್ಷ್ಮೀ ತೊಂಬಟ್ಟು ಶರಣಾಗತಿ

Udupi: ಉಡುಪಿ ಡಿಸಿ ಮುಂದೆ ನಕ್ಸಲ್ ಲಕ್ಷ್ಮೀ ತೊಂಬಟ್ಟು ಶರಣಾಗತಿ

0 comments

Udupi: ಫೆ. 2 ರಂದು ಉಡುಪಿ (Udupi) ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಮುಂದೆ ನಕ್ಸಲ್ ಲಕ್ಷ್ಮೀ ತೊಂಬಟ್ಟು ಅವರು ಶರಣಾಗತಿಯಾಗಿದ್ದು, ತಾನು ಯಾರ ಒತ್ತಡವಿಲ್ಲದೇ ಶರಣಾಗಿದ್ದೇನೆ. ಸಿಎಂ ಕೊಟ್ಟ ಅವಕಾಶ ನೋಡಿ ಮುಖ್ಯವಾಹಿನಿಗೆ ಬಂದಿರುವುದಾಗಿ ತಿಳಿಸಿದರು.

ನನ್ನ ಊರಿಗೆ ಏನೂ ಇಲ್ಲ. ಶಾಲೆ, ಆಸ್ಪತ್ರೆ, ನೀರು ಬೇಕಿದೆ. ಅವುಗಳ ವ್ಯವಸ್ಥೆ ಮಾಡುವ ಭರವಸೆಯನ್ನು ಸರ್ಕಾರ ನೀಡಿದೆ. ಹೀಗಾಗಿ ತಾನು ಮುಖ್ಯವಾಹಿನಿಗೆ ಬರೋದಕ್ಕೆ ಶರಣಾಗಿರುವುದಾಗಿ ಹೇಳಿದರು.

ಬಳಿಕ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರು ನಕ್ಸಲ್ ಲಕ್ಷ್ಮೀ ತೊಂಬಟ್ಟು ಅವರು ಶರಣಾಗತಿಯಾಗಿದ್ದಾರೆ. ಅವರಿಗೆ ಎ ಕೆಟಗರಿಯಡಿಯಲ್ಲಿ ಪರಿಹಾರವನ್ನು ಜಿಲ್ಲಾಡಳಿತ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.

You may also like