Home » ಉಡುಪಿ | ಪಿಕಪ್ ವಾಹನದಲ್ಲಿ ಅಕ್ರಮ ಗೋ ಸಾಗಾಟ , ಆರೋಪಿ ಬಂಧನ

ಉಡುಪಿ | ಪಿಕಪ್ ವಾಹನದಲ್ಲಿ ಅಕ್ರಮ ಗೋ ಸಾಗಾಟ , ಆರೋಪಿ ಬಂಧನ

0 comments

ಆರು ಗೋವುಗಳನ್ನು ಪಿಕಪ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಬಂಧಿಸಲಾಗಿದೆ.

ಶಬೀರ್ ಬಂಧಿತ ಆರೋಪಿ. ಈತ ಕುಂದಾಪುರ ತಾಲೂಕಿನಿಂದ ಭಟ್ಕಳಕ್ಕೆ ಪಿಕಪ್ ನಲ್ಲಿ ಗೋವುಗಳನ್ನು ತುಂಬಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿಯೊಂದಿಗೆ ಭಟ್ಕಳದಲ್ಲಿ ಕಾರ್ಯಚರಣೆ ನಡೆಸಿದ ಪೋಲಿಸರು ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ತಪಾಸಣೆ ನಡೆಸಿದಾಗ ಆರು ಗೋವುಗಳು ಇರುವುದು ಕಂಡು ಬಂದಿದೆ. ಬೈಂದೂರಿನ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಪಿ.ಎಸ್.ಐ ಪವನ್ ನಾಯಕ್ ಮತ್ತು ಸಿಬ್ಬಂದಿ ನೇತ್ರತ್ವದಲ್ಲಿ ಕಾರ್ಯಚರಣೆ ಮಾಡಲಾಗಿದೆ.

ಬೈಂದೂರಿನಿಂದಲೇ ಗೋವು ಸಾಗಾಟದ ವಾಹನವನ್ನು ಪೋಲಿಸರು ಹಿಂಬಾಲಿಸಿದ್ದಾರೆ. ಭಟ್ಕಳ ತಾಲೂಕು ವ್ಯಾಪ್ತಿಯಲ್ಲಿ ಬಂಧನ ಪ್ರಕ್ರಿಯೆ ನಡೆದಿದೆ. ಪಿಕಪ್ ನಲ್ಲಿದ್ದ ಆರು ಗೋವನ್ನು ರಕ್ಷಣೆ ಮಾಡಲಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment