Udupi News: ಪುತ್ರನಿಗೆ ಸರಿಯಾದ ಉದ್ಯೋಗ ಸಿಕ್ಕಿಲ್ಲ ಎಂದು ಮನನೊಂದ ಮಹಿಳೆಯೊಬ್ಬಳು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಮಹಾರಾಷ್ಟ್ರದ ಥಾಣೆ ನಿವಾಸಿ ಲತಾ ಭಾಸ್ಕರ್ (53) ಪತಿ ಭಾಸ್ಕರ್ ಜೊತೆ ವಾಸವಾಗಿದ್ದರು. ಆ.8 ರಂದು ಬೆಳಗ್ಗೆ ಲತಾ ಕೆಲಸಕ್ಕೆ ಹೋಗಿ ಬರುವುದಾಗಿ ಪತಿಗೆ ಹೇಳಿದ್ದು, ನಂತರ ಮರಳಿ ಬಂದಿಲ್ಲ. ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಬಂದಿದೆ. ಎಷ್ಟೇ ಹುಡುಕಾಡಿದರೂ ಪತ್ತೆಯಾಗದ ಕಾರಣ ಮುಂಬೈನ ವೊಡವುಳಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಲಾಗಿತ್ತು.
ಆ.12 ರಂದು ಉಡುಪಿಯ (Udupi News) ಖಾಸಗಿ ಆಸ್ಪತ್ರೆಯೊಂದರಲ್ಲಿ ಭಾಸ್ಕರ್ ಅವರಿಗೆ ಕರೆ ಬಂದಿದ್ದು, ಲತಾ ಅವರು ವಿಷ ಪದಾರ್ಥ ಸೇವನೆ ಮಾಡಿ ನಮ್ಮ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಹೇಳಿದ್ದಾರೆ. ಆ.13 ರಂದು ಹೆಚ್ಚಿನ ಚಿಕಿತ್ಸೆಗೆಂದು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ.30 ರಂದು ಮೃತಪಟ್ಟಿದ್ದಾರೆ
ತನ್ನ ಪುತ್ರ ಅಮಿತ್‌ಗೆ ಉದ್ಯೋಗ ದೊರಕಿಲ್ಲ ಎನ್ನುವ ವಿಷಯಕ್ಕೆ ಮನನೊಂದು ವಿಷ ಸೇವನೆ ಮಾಡಿದ್ದಾಳೆ ಎಂದು ಪತಿ ಭಾಸ್ಕರ್ ಅವರು ನೀಡಿದ ದೂರಿನ ಪ್ರಕಾರ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮಹಿಳಾ ಏಕದಿನ ವಿಶ್ವಕಪ್‌ನ ಬಹುಮಾನ ಹಣ ಏರಿಕೆ : ಮೊತ್ತವನ್ನು 4 ಪಟ್ಟು ಹೆಚ್ಚಳ ಮಾಡಿದ ಐಸಿಸಿ
