Home » ‌Ujire (Dakshina Kannada): ಆಕಾಂಕ್ಷ ಮೃತದೇಹ ಇಂದು ಧರ್ಮಸ್ಥಳಕ್ಕೆ

‌Ujire (Dakshina Kannada): ಆಕಾಂಕ್ಷ ಮೃತದೇಹ ಇಂದು ಧರ್ಮಸ್ಥಳಕ್ಕೆ

0 comments

‌Ujire (Dakshina Kannada): ಧರ್ಮಸ್ಥಳದ ಯುವತಿ ಪಂಜಾಬ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಆರೋಪಕ್ಕೆ ಸಂಬಂಧಪಟ್ಟಂತೆ ಕೇರಳ ಮೂಲದ ಪ್ರೊಫೆಸರ್‌ ಬಿಜಿಲ್‌ ಸಿ ಮ್ಯಾಥ್ಯೂ ಅವರನ್ನು ಸೋಮವಾರ ರಾತ್ರಿ ಪೊಲೀಸರು ಬಂಧನ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

ಸೋಮವಾರ ಮರಣೋತ್ತರ ಪರೀಕ್ಷೆ ಮಾಡಿದ ಸಿವಿಲ್‌ ಸರಕಾರಿ ಆಸ್ಪತ್ರೆ ವೈದ್ಯರು, ಶವವನ್ನು ಮನೆ ಮಂದಿಗೆ ಹಸ್ತಾಂತರ ಮಾಡಿದ್ದಾರೆ. ದೆಹಲಿ ವಿಮಾನ ನಿಲ್ದಾಣಕ್ಕೆ ರಾತ್ರಿ ಎರಡು ಗಂಟೆ ವೇಳೆಗೆ ಅಂಬುಲೆನ್ಸ್‌ ಮೂಲಕ ಶವವನ್ನು ತರಲಾಗಿತ್ತು. ಆಕಾಂಕ್ಷ ಕೆಲಸ ಮಾಡುತ್ತಿದ್ದ ಕಂಪನಿಯು ದೆಹಲಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಶವವನ್ನು ಸಾಗಿಸಲು ಉಚಿತವಾಗಿ ವಿಮಾನ ವ್ಯವಸ್ಥೆ ಮಾಡಿದೆ.

ಕುಟುಂಬದ ಮೂಲಗಳ ಪ್ರಕಾರ, ಬೆಂಗಳೂರಿನಿಂದ ಆಂಬುಲೆನ್ಸ್‌ ಮೂಲಕ ಧರ್ಮಸ್ಥಳ ಗ್ರಾಮದ ಬೊಳಿಯಾರ್‌ಗೆ ಬುಧವಾರ ಶವ ತರಲಾಗುವುದು ಎಂದು ಹೇಳಲಾಗಿದೆ. ಬುಧವಾರ ಆಕಾಂಕ್ಷ ಮೃತದೇಹ ಧರ್ಮಸ್ಥಳ ತಲುಪಲಿದ್ದು, ಬೊಳಿಯಾರ್‌ನಲ್ಲಿರುವ ಅವರ ಮನೆಯ ಬಳಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

You may also like