Home » ಉಜಿರೆ: ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜ. 19ರಿಂದ ಸಂಜೆ ಕ್ಲಿನಿಕ್ ಪ್ರಾರಂಭ

ಉಜಿರೆ: ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜ. 19ರಿಂದ ಸಂಜೆ ಕ್ಲಿನಿಕ್ ಪ್ರಾರಂಭ

0 comments

ಉಜಿರೆ: ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಮತ್ತಿತರರ ಬೇಡಿಕೆಯ ಮೇರೆಗೆ, ಪೂಜ್ಯ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದದಲ್ಲಿ ಡಿ. ಹರ್ಷೇಂದ್ರ ಕುಮಾ‌ರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾ‌ರ್ ಇವರ ಮಾರ್ಗದರ್ಶನದಲ್ಲಿ ಉಜಿರೆ ಎಸ್‌.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜ.19ರಿಂದ ಸಂಜೆ ಕ್ಲಿನಿಕ್ ಪ್ರಾರಂಭಗೊಳ್ಳಲಿದೆ.

ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಕೆಲವೊಂದು ಜನರಿಗೆ ಹಗಲು ಹೊತ್ತಿನಲ್ಲಿ ತಮ್ಮ ಕೆಲಸದ ಒತ್ತಡದಿಂದ ವೈದ್ಯರನ್ನು ಭೇಟಿ ಆಗಲು ಸಾಧ್ಯವಾಗುವುದಿಲ್ಲ. ಈ ಉದ್ದೇಶದಿಂದ ಉಜಿರೆಯ ಎಸ್‌.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಜೆ ಕ್ಲಿನಿಕ್ ಪ್ರಾರಂಭಿಸಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 5 ರಿಂದ 7 ರವರೆಗೆ ತಜ್ಞ ವೈದ್ಯರಿಂದ ವೈದ್ಯಕೀಯ ಸೇವೆ ನೀಡಲು ಉದ್ದೇಶಿಸಲಾಗಿದೆ.

ಇದರಿಂದ ಉದ್ಯೋಗಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರು ತಿಳಿಸಿದ್ದಾರೆ. ಕಿವಿ-ಮೂಗು-ಗಂಟಲು ತಜ್ಞರು ಮಂಗಳವಾರ ಮತ್ತು ಶುಕ್ರವಾರ, ಶಸ್ತçಚಿಕಿತ್ಸಾ ತಜ್ಞರು ಸೋಮವಾರ ಹಾಗೂ ಗುರುವಾರ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಬುಧವಾರ ಮತ್ತು ಶನಿವಾರ, ನೇತ್ರ ಚಿಕಿತ್ಸಾ ತಜ್ಞರು ಮಂಗಳವಾರ, ಮೂಳೆ ಶಸ್ತ್ರಚಿಕಿತ್ಸಾ ತಜ್ಞರು ಸೋಮವಾರ ಹಾಗೂ ಗುರುವಾರ, ಮಕ್ಕಳರೋಗ ತಜ್ಞರು ಬುಧವಾರ ಮತ್ತು ಶನಿವಾರ ಚರ್ಮರೋಗ ತಜ್ಞರು ಮಂಗಳವಾರ ಮತ್ತು ಶುಕ್ರವಾರ ಸಂಜೆ ಕ್ಲಿನಿಕ್‌ನಲ್ಲಿ ಲಭ್ಯವಿರುತ್ತಾರೆ. ಉಳಿದಂತೆ ದಿನದ 24 ಗಂಟೆಯೂ ಎಂದಿನಂತೆ ಈ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಲಭ್ಯವಿರಲಿದೆ.

ತಮಗೆ ಬೇಕಾದ ದಿನಗಳಲ್ಲಿ, ತಮಗೆ ಬೇಕಾದ ತಜ್ಞ ವೈದ್ಯರ ನೇಮಕಾತಿಯನ್ನು ದೂರವಾಣಿ 08256-295611/615 7760397878 ಸಂಖ್ಯೆಗೆ ಕರೆ ಮಾಡುವ ಮೂಲಕ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಸಂಜೆ ಕ್ಲಿನಿಕ್‌ನಲ್ಲಿ ನಗದು ಪಾವತಿಸುವ ರೋಗಿಗಳಿಗೆ ವೈದ್ಯರ ಸಮಾಲೋಚನೆ ಶುಲ್ಕ ರೂ. 250 ಹಾಗೂ ಸಂಪೂರ್ಣ ಸುರಕ್ಷಾ ಮತ್ತು ಕೆ.ಕೆ.ಎಸ್.ವೈ ಹೊಂದಿರುವವರಿಗೆ ವೈದ್ಯರ ಸಮಾಲೋಚನೆ ಶುಲ್ಕದಲ್ಲಿ ರೂ. 100 ಹೆಚ್ಚುವರಿ ಶುಲ್ಕ ಇರಲಿದೆ. ಪ್ರಯೋಗಾಲಯ, ರೇಡಿಯಾಲಜಿ, ಪ್ರೊಸಿಜ‌ರ್ ಮತ್ತು ಒಳರೋಗಿ ಸೇವೆಗಳಿಗೆ ಸಂಪೂರ್ಣ ಸುರಕ್ಷಾ ಮತ್ತು ಕೆ.ಕೆ.ಎಸ್.ವೈ ಯೋಜನೆಗಳು ಅನ್ವಯಿಸುತ್ತದೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

You may also like