Home News ಉಜಿರೆ: ಎಸ್‌.ಡಿ.ಎಂ ಪದವಿ ಪೂರ್ವ ಕಾಲೇಜು: ಎನ್‌.ಎಸ್.ಎಸ್. ವಾರ್ಷಿಕ ಚಟುವಟಿಕೆಗಳ ಸಮಾರೋಪ

ಉಜಿರೆ: ಎಸ್‌.ಡಿ.ಎಂ ಪದವಿ ಪೂರ್ವ ಕಾಲೇಜು: ಎನ್‌.ಎಸ್.ಎಸ್. ವಾರ್ಷಿಕ ಚಟುವಟಿಕೆಗಳ ಸಮಾರೋಪ

Hindu neighbor gifts plot of land

Hindu neighbour gifts land to Muslim journalist

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ 2025-26ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಸಮಾರೋಪ ಹಾಗೂ ಹಿರಿಯ ಸ್ವಯಂ ಸೇವಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಲೇಜಿನ ಗ್ರಂಥಪಾಲಕ ಮನೋಹ‌ರ್ ಶೆಟ್ಟಿ ಮಾತನಾಡಿ “ತರಗತಿಯ ನಾಲ್ಕುಗೋಡಗಳ ಮಧ್ಯೆ ಕಲಿಸಲಾಗದ್ದನ್ನು ಎನ್. ಎಸ್. ಎಸ್ ಕಲಿಸುತ್ತದೆ. ಎನ್. ಎಸ್. ಎಸ್ ಸ್ವಯಂ ಸೇವಕರಾಗಿ ನೀವು ಪಡೆದುಕೊಂಡ ಅನುಭವಗಳು ನಿಮ್ಮ ಮುಂದಿನ ಜೀವನಕ್ಕೆ, ವೃತ್ತಿಗೆ ದಾರಿದೀಪವಾಗಲಿ. ಎನ್. ಎಸ್. ಎಸ್ ಆಶಯಗಳಿಗೆ ಎಂದೆಂದಿಗೂ ಬದ್ಧರಾಗಿ ಸ್ವಸ್ಥ ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸಿ” ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಸಮಾರೋಪ ಭಾಷಣ ಮಾಡಿದ ಪ್ರಾಂಶುಪಾಲ ಪ್ರಮೋದ್ ಕುಮಾರ್” ಎನ್.ಎಸ್.ಎಸ್ ನಿಂದ ಮಾಡುವ ಯಾವುದೇ ಕೆಲಸವು ಸೇವೆ ಎಂಬ ನೆಲೆಯಲ್ಲಿ ರೂಪು ಗೊಳ್ಳುತ್ತದೆ. ಎನ್. ಎಸ್. ಎಸ್ ಮೂಲಕ ಅದೆಷ್ಟೋ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಸಮಾಜದೊಂದಿಗೆ ಬೆರೆತು ಹೇಗೆ ಬದುಕಬೇಕೆಂಬ ಪಾಠ ಎನ್. ಎಸ್. ಎಸ್ ಕಲಿಸಿ ಕೊಡುತ್ತದೆ. ಇದನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ “ಎಂದು ಹೇಳಿದರು.

ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಡಾ. ರಾಜೇಶ್ ಬಿ, ಯೋಜನಾಧಿಕಾರಿ ವಿಶ್ವನಾಥ್ ಎಸ್., ಸಹ ಯೋಜನಾಧಿಕಾರಿ ಶೋಭಾ ಪಿ., ಎನ್.ಎಸ್.ಎಸ್ ಘಟಕದ ನಾಯಕಿ ರಾಶಿಕ, ನಾಯಕ ಸಂಕೇತ್ ಉಪಸ್ಥಿತರಿದ್ದರು.

ನಾಯಕಿ ರಾಶಿಕ ವಾರ್ಷಿಕ ಚಟುವಟಿಕೆಗಳ ವರದಿ ವಾಚಿಸಿದರು. ಇದೇ ಸಂದರ್ಭ ಸ್ವಯಂ ಸೇವಕರಿಗೆ ಪ್ರಮಾಣ ಪತ್ರ ನೀಡಲಾಯಿತು. ಹಿರಿಯ ಸ್ವಯಂ ಸೇವಕರಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಅಪೇಕ್ಷಾ ಸ್ವಾಗತಿಸಿ,ಸ್ವಯಂ ಸೇವಕಿ ಮಾನ್ವಿತಾ ನಿರೂಪಿಸಿದರು. ನಾಯಕ ಸಂಕೇತ್ ಧನ್ಯವಾದವಿತ್ತರು.