Russian representative: ಟರ್ಕಿ(tarki) ಯ ರಾಜಧಾನಿ ಅಂಕಾರಾದಲ್ಲಿ ನಡೆದ ಕಪ್ಪು ಸಮುದ್ರದ ಆರ್ಥಿಕ ಸಹಕಾರದ (PABSEC) ಸಂಸದೀಯ ಸಮ್ಮೇಳನದಲ್ಲಿ ಉಕ್ರೇನ್(Ukraine) ಸಂಸದ ಓಲೆಕ್ಸಾಂಡರ್ ಮಾರಿಕೋವ್ಸ್ಕಿ(Oleksandr Marikovsky) ರಷ್ಯಾದ ಪ್ರತಿನಿಧಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ರಷ್ಯಾ ಹಾಗೂ ಉಕ್ರೇನ್(Ukraine) ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯೆ ಟರ್ಕಿಯ ರಾಜಧಾನಿ ಅಂಕಾರಾ(Ankara)ದಲ್ಲಿ ನಡೆದ ಸಮ್ಮೇಳನದಲ್ಲಿ ಉಕ್ರೇನ್ ಸಂಸದ ಓಲೆಕ್ಸಾಂಡರ್ ಮಾರಿಕೋವ್ಸ್ಕಿ ರಷ್ಯಾದ ಪ್ರತಿನಿಧಿ ಮೇಲೆ ಹಲ್ಲೆ(Russian representative) ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾರಿಕೋವ್ಸ್ಕಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ ಟರ್ಕಿಯ ರಾಜಧಾನಿ ಅಂಕಾರಾದಲ್ಲಿ 61ನೇ ಸಂಸದೀಯ ಸಭೆ ಆಯೋಜನೆ ಮಾಡಲಾಗಿತ್ತು. ಈ ಸಭೆಯಲ್ಲಿ ರಷ್ಯಾ, ಉಕ್ರೇನ್ ಸೇರಿದಂತೆ ಹಲವು ದೇಶದ ಪ್ರತಿನಿಧಿಗಳು ಪಾಲ್ಗೊಂಡು ತಮ್ಮ ವಿಚಾರವನ್ನು ಮಂಡಿಸಿದ್ದರು. ಸಭೆ ಮುಗಿದ ಬಳಿಕ ಉಕ್ರೇನ್ ಸಂಸದ ಓಲೆಕ್ಸಾಂಡರ್ ಮಾರಿಕೋವ್ಸ್ಕಿ ಅವರ ಕೈಯಲ್ಲಿದ್ದ ಉಕ್ರೇನಿಯನ್ ಧ್ವಜವನ್ನು ರಷ್ಯಾದ ಪ್ರತಿನಿಧಿ ಕಿತ್ತುಕೊಂಡಿದ್ದಾರೆ. ಇದರಿಂದ ಕೋಪಗೊಂಡ ಉಕ್ರೇನ್ ಸಂಸದ ಓಲೆಕ್ಸಾಂಡರ್ ಮಾರಿಕೋವ್ಸ್ಕಿ ಕೂಡಲೇ ರಷ್ಯಾ ಪ್ರತಿನಿಧಿಯ ಹಿಂದೆ ತೆರಳಿ ಅವರಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಉಳಿದ ರಷ್ಯಾ ಪ್ರತಿನಿಧಿಗಳು ಗಲಭೆಯನ್ನು ತಡೆದಿದ್ದಾರೆ. ಹಲ್ಲೆಯಿಂದ ರಷ್ಯಾದ ಪ್ರತಿನಿಧಿಯ ಮುಖ ಊದಿಕೊಂಡಿದೆ.
ಇನ್ನು ಬ್ಲ್ಯಾಕ್ ಸಿ ಎಕಾನಿಮಿಕ್ ಕಮ್ಯೂನಿಟಿ ಸಭೆಯಲ್ಲಿ ಉಕ್ರೇನ್ ಸಂಸದ ಒಲೆಸ್ಕಾಂಡರ್, ಮಾರಿಕೋವಸ್ಕಿ ದೇಶ ಎದುರಿಸುತ್ತಿರುವ ಯುದ್ಧ, ಸಂಕಷ್ಟದ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದರು. ಇದೇ ವೇಳೆ ರಷ್ಯಾದ ಅತಿಕ್ರಮಣ, ನೀತಿ, ಯುದ್ಧದ ವಿರುದ್ಧದ ಹರಿಹಾಯ್ದಿದ್ದರು.
ಅಲ್ಲದೆ ಮಾಸ್ಕೋ ಗುರುವಾರ ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿಯ ಮಾಸ್ಟರ್ ಮೈಂಡ್ ಎಂದು US ಆರೋಪಿಸಿದೆ, ವಾಷಿಂಗ್ಟನ್ ಇದನ್ನು ನಿರಾಕರಿಸಿತು. ಉಕ್ರೇನ್ ಮೇಲೆ ಡ್ರೋನ್ ದಾಳಿ ನಡೆದಿದ್ದು ಅದರಲ್ಲಿ 21 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಹಾಗೆಯೇ ವ್ಲಾಡಿಮಿರ್ ಪುಟಿನ್ ಇದ್ದ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂದು ಆರೋಪಿಸಲಾಗಿತ್ತು, ಆದರೆ ಉಕ್ರೇನ್ ನಾವೇನು ಮಾಡಿಲ್ಲ ಎಂದು ಹೇಳಿತ್ತು.
https://twitter.com/officejjsmart/status/1654169241237454876?t=bWQaDQKdnBdZ3qZENoO0ww&s=08
ಇದನ್ನೂ ಓದಿ: ಬೈಂದೂರು ಬಿಜೆಪಿ ಅಭ್ಯರ್ಥಿ ಪರವಾಗಿ ಮತಬೇಟೆ ನಡೆಸಲು ಬಂದ ಬಿಗ್ ಬಾಸ್ ವಿನ್ನರ್ , ನಟ ಶೈನ್ ಶೆಟ್ಟಿ ನಟ ಪ್ರಮೋದ್ ಶೆಟ್ಟಿ!
