Home » ನಮ್ಮ ಜನರ ಮೇಲೆ ದಾಳಿ ನಡೆಸಿ, ದೌರ್ಜನ್ಯ ಎಸಗಿದ ಯಾರನ್ನೂ ಸುಮ್ಮನೆ ಬಿಡುವ ಮಾತೇ ಇಲ್ಲ ಎಂದು ಗುಡುಗಿದ ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ !!

ನಮ್ಮ ಜನರ ಮೇಲೆ ದಾಳಿ ನಡೆಸಿ, ದೌರ್ಜನ್ಯ ಎಸಗಿದ ಯಾರನ್ನೂ ಸುಮ್ಮನೆ ಬಿಡುವ ಮಾತೇ ಇಲ್ಲ ಎಂದು ಗುಡುಗಿದ ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ !!

0 comments

ರಷ್ಯಾ ದಾಳಿಯಿಂದ ಉಕ್ರೇನ್ ನಲುಗಿಹೋಗಿದ್ದು, ಹೆಣದ ರಾಶಿಯೇ ಕಾಣುವಂತಾಗಿದೆ.ಗುಂಡುಗಳ ಶಬ್ಧವನ್ನೇ ಕೇಳುವಂತಾಗಿದ್ದ ಉಕ್ರೇನ್ ಇದೀಗ ಕೆಂಡಮಂಡಲವಾಗಿದೆ.ನಮ್ಮ ನಗರ, ನಮ್ಮ ಜನರ ಮೇಲೆ ದಾಳಿ ನಡೆಸಿ, ದೌರ್ಜನ್ಯ ಎಸಗಿದ ಯಾರನ್ನೂ ಸುಮ್ಮನೇ ಬಿಡುವ ಮಾತೇ ಇಲ್ಲ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಎಚ್ಚರಿಸಿದ್ದಾರೆ.

ನಮ್ಮ ಜನರ ಹಾಗೂ ನಗರಗಳ ಮೇಲೆ ಶೆಲ್ ದಾಳಿ ನಡೆಸಿದ ಪ್ರತಿಯೊಬ್ಬರನ್ನೂ ಶಿಕ್ಷಿಸುತ್ತೇವೆ.ದಾಳಿ ನಡೆಸಿದವರು ನೆಲದಲ್ಲಿ ಇನ್ನು ಸಿಗುವುದು ಸಮಾಧಿಗಳು ಮಾತ್ರ ಎಂದಿದ್ದಾರೆ.ಜನರನ್ನೂ ನೋಡದೇ ಮನಸೋ ಇಚ್ಛೆ ದಾಳಿ ನಡೆಸಲಾಗಿದೆ. ಈ ರೀತಿ ದಾಳಿ ಮಾಡಿ ನೀವು ನೆಮ್ಮದಿಯಾಗಿ ಇರುತ್ತೀರಿ ಎಂದರೆ ಅದು ಸುಳ್ಳು. ದಾಳಿ ಮಾಡಿದವರು, ದಾಳಿಗೆ ಆದೇಶ ಕೊಟ್ಟವರು ಎಲ್ಲರ ನೆಮ್ಮದಿ ಕಸಿಯುತ್ತೇವೆ. ನಿಮ್ಮ ನೆಲದಲ್ಲಿ ಇನ್ನು ಶಾಂತಿ, ನೆಮ್ಮದಿ ಸಿಗೋದಿಲ್ಲ, ಸಿಗುವುದೆಲ್ಲ ಸಮಾಧಿಗಳು ಮಾತ್ರ ಎಂದು ರಷ್ಯಾಗೆ ಉಕ್ರೇನ್ ಅಧ್ಯಕ್ಷ ಎಚ್ಚರಿಕೆ ನೀಡಿದ್ದಾರೆ.

ರಷ್ಯಾ ಇದೀಗ ಉಕ್ರೇನ್‌ನ ರಕ್ಷಣಾ ಉದ್ಯಮಗಳ ಮೇಲೆ ಬಾಂಬ್ ದಾಳಿ ನಡೆಸುವ ಘೋಷಣೆ ಮಾಡಿದೆ. ಈ ರಕ್ಷಣಾ ಉದ್ಯಮಗಳು ಉಕ್ರೇನ್‌ನ ನಗರ ಪ್ರದೇಶದಲ್ಲಿದ್ದು,ಈ ಪ್ರದೇಶದಲ್ಲಿ ಹೆಚ್ಚು ಜನರು ಇದ್ದಾರೆ. ನಾಗರಿಕರ ಮೇಲೆ ದಾಳಿ ನಡೆಸಿದರೆ ಅದು ಕೊಲೆಯಾಗುತ್ತದೆ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.

You may also like

Leave a Comment