Home » ‘ತನ್ನ ಕುಟುಂಬವನ್ನು ರಕ್ಷಿಸಿ ‘ ಎಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಭಾರತಕ್ಕೆ ಮನವಿಮಾಡಿಕೊಂಡ ಉಕ್ರೇನ್ ನಾಯಿ

‘ತನ್ನ ಕುಟುಂಬವನ್ನು ರಕ್ಷಿಸಿ ‘ ಎಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಭಾರತಕ್ಕೆ ಮನವಿಮಾಡಿಕೊಂಡ ಉಕ್ರೇನ್ ನಾಯಿ

0 comments

ಉಕ್ರೇನ್ ಪರಿಸ್ಥಿತಿ ಭಯಾನಕವಾಗಿದ್ದು,ಯುದ್ಧ ಭೀತಿಯಿಂದ ಜನರ ಆಕ್ರಂದನ ಮುಗಿಲುಮುಟ್ಟಿದೆ. ಈ ನಡುವೆ ಉಕ್ರೇನ್ ನಲ್ಲಿರುವ ನಾಯಿಯೊಂದು ತನ್ನನ್ನ ರಕ್ಷಿಸಿ ಎಂದು ಮನವಿ ಮಾಡಿದ್ದು ಹೃದಯ ಕರಗುವಂತೆ ಮಾಡಿದೆ ಆ ಮೂಕ ಪ್ರಾಣಿಯ ರೋದನೆ.

ಕೇರಳ ಮೂಲದ ಚಪಾತಿ ಎಂಬ ನಾಯಿಯು ಇನ್ಸ್ಟ್ರಾಗ್ರಾಂನಲ್ಲಿ ತನ್ನ ಕುಟುಂಬವನ್ನ ರಕ್ಷಿಸಿ ಎಂಬ ಸಂದೇಶ ಹಾಕಲಾಗಿದೆ.ಐದು ವರ್ಷದ ಹಿಂದೆ ಉಕ್ರೇನ್ ದಂಪತಿಗಳಾದ ಯುಜೀನ್ ಮತ್ತು ಕ್ರಿಸ್ಟಿನಾ ದಂಪತಿ ಕೊಚ್ಚಿಗೆ ಭೇಟಿ ನೀಡಿದ್ದರು.ಈ ವೇಳೆ ಹಸಿವಿನಿಂದ ಬಳಲುತ್ತಿದ್ದ ನಾಯಿಗೆ ಊಟ ಹಾಕಿ ಆ ನಾಯಿಯನ್ನ ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ.ನಂತರ ಫೇಸ್ ಬುಕ್ ಮತ್ತು ಇನ್ಸ್ಟ್ರಾದಲ್ಲಿ ಆ ದಂಪತಿಗಳು ನಾಯಿ ಹೆಸರಿನಲ್ಲಿ‌ ಟ್ರಾವೆಲ್ ಚಪಾತಿ ಎಂಬ ಅಕೌಂಟ್ ತೆರೆದಿದ್ದಾರೆ.

https://www.instagram.com/p/CaYfwAXDK4c/?utm_medium=copy_link

ಸದ್ಯ ಉಕ್ರೇನ್ ನಲ್ಲಿ ಭೀಕರ ಯುದ್ಧದ ಹಿನ್ನಲೆ ಆ ನಾಯಿಯ ಅಕೌಂಟ್ ನಿಂದ ಪೋಸ್ಟ್ ಮಾಡಲಾಗಿದ್ದು , ಲಕ್ಷಾಂತರ ಜನತೆ ಸಂಕಷ್ಟದಲ್ಲಿದ್ದಾರೆ ಉಕ್ರೇನ್ ನ ಪರವಾಗಿ ಮಾತನಾಡು ಎಂದು ಭಾರತಕ್ಕೆ ಮನವಿ ಮಾಡಿದೆ.

You may also like

Leave a Comment