ತೋಟಕ್ಕೆ ನುಗ್ಗಿದ ಕೋಣವನ್ನು ಹರಿತವಾದ ಆಯುಧದಿಂದ ಕಡಿದು ಕೊಂದ ಘಟನೆ ನಡೆದಿದ್ದು, ವಿಚಾರ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಆಕ್ರೋಶ ಹೊರಹಾಕಿದ್ದಾರೆ.ಘಟನೆಯ ವಿರುದ್ಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು,ಉಳ್ಳಾಲ ಉದ್ವಿಗ್ನ ಸ್ಥಿತಿಯತ್ತ ತೆರಳುವುದನ್ನು ತಪ್ಪಿಸಿದಂತಾಗಿದೆ.
ಘಟನೆ ವಿವರ:ಉಳ್ಳಾಲ ಠಾಣಾ ವ್ಯಾಪ್ತಿಯ ಬಲ್ಯ ಎಂಬಲ್ಲಿನ ಜಯರಾಮ ಶೆಟ್ಟಿ ಎನ್ನುವವರ ತೋಟಕ್ಕೆ ನಿನ್ನೆ ಸಂಜೆ ವೇಳೆಗೆ ಕೋಣ ನುಗ್ಗಿದ್ದು,ಹರಿತವಾದ ಆಯುಧದಿಂದ ಕೋಣದ ಕುತ್ತಿಗೆ ಕಡಿಯಲಾಗಿತ್ತು. ಕಡಿದ ಏಟಿಗೆ ತೀವ್ರ ರಕ್ತಸ್ರಾವಗೊಂಡು ಕೋಣ ಸಾವನ್ನಪ್ಪಿದ್ದು ವಿಷಯ ಊರಿನ ಸುತ್ತಲೂ ಹಬ್ಬಿದೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದು,ಕೃತ್ಯ ನಡೆಸಿದ ವ್ಯಕ್ತಿ ತನ್ನ ಸ್ಕೂಟರ್ ಬಿಟ್ಟು ಪರಾರಿಯಾಗಿದ್ದಾನೆ.ಇದಕ್ಕೆ ತೋಟದ ಮಾಲೀಕ ಜಯರಾಮ ಶೆಟ್ಟಿ ಸಾಥ್ ನೀಡಿದ್ದಾನೆ ಎಂದು ಆರೋಪಿಸಿದ ಕಾರ್ಯಕರ್ತರು,ಆತನನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು,ಸಾಥ್ ನೀಡಿದ್ದಾನೆ ಎನ್ನಲಾದ ತೋಟದ ಮಾಲೀಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
