Home » Ullala: ಜ್ವರದಿಂದ ಬಳಲುತ್ತಿದ್ದ ಉಳ್ಳಾಲದ ಯುವಕ ಸಾವು!!

Ullala: ಜ್ವರದಿಂದ ಬಳಲುತ್ತಿದ್ದ ಉಳ್ಳಾಲದ ಯುವಕ ಸಾವು!!

337 comments

Ullala: ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಉಳ್ಳಾಲ(Ullala) ನಗರಸಭಾ ವ್ಯಾಪ್ತಿಯ ಅಕ್ಕರೆಕೆರೆ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.

ಮೃತಪಟ್ಟ ಯುವಕನನ್ನು ಅಕ್ಕರೆಕೆರೆ ನಿವಾಸಿ ಅಬ್ದುಲ್ ಅಝೀಝ್ ಉಸ್ತಾದ್ ಹಾಗೂ ಜಮೀಲಾ ದಂಪತಿಯ ಪುತ್ರ ಮುಝೈನ್(22) ಎಂದು ಗುರುತಿಸಲಾಗಿದೆ. ಜ್ವರದಿಂದ ಬಳಲುತ್ತಿದ್ದ ಮುಝೈನ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ಮೃತರು ತಂದೆ, ತಾಯಿ, ಮೂವರು ಸಹೋದರರು, ಓರ್ವ ಸಹೋದರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ಎನ್ನಲಾಗಿದೆ.

You may also like

Leave a Comment