Home » ಉಳ್ಳಾಲ: ಕಾಸರಗೋಡಿನಿಂದ ಮಂಗಳೂರಿಗೆ ಅಕ್ರಮ ಗೋಮಾಂಸ ಸಾಗಾಟ!! ಉಳ್ಳಾಲ ಟೋಲ್ ನಲ್ಲಿ ಸಿಸಿಬಿ ಪೊಲೀಸರ ಕಾರ್ಯಾಚರಣೆ-ಆರೋಪಿಗಳ ಬಂಧನ

ಉಳ್ಳಾಲ: ಕಾಸರಗೋಡಿನಿಂದ ಮಂಗಳೂರಿಗೆ ಅಕ್ರಮ ಗೋಮಾಂಸ ಸಾಗಾಟ!! ಉಳ್ಳಾಲ ಟೋಲ್ ನಲ್ಲಿ ಸಿಸಿಬಿ ಪೊಲೀಸರ ಕಾರ್ಯಾಚರಣೆ-ಆರೋಪಿಗಳ ಬಂಧನ

0 comments

ಕೇರಳದಿಂದ ಮಂಗಳೂರಿನ ಉಳ್ಳಾಲಕ್ಕೆ ದನದ ಮಾಂಸ ಸಾಗಾಟ ನಡೆಸುತ್ತಿದ್ದ ತಂದೆ ಹಾಗೂ ಮಕ್ಕಳಿಬ್ಬರನ್ನು ಸಿಸಿಬಿ ಪೊಲೀಸರು ತಲಪಾಡಿ ಟೋಲ್ ನಲ್ಲಿ ಬಂಧಿಸಿ, ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದ ಘಟನೆ ನಡೆದಿದೆ.

ಬಂಧಿತ ಆರೋಪಿಗಳನ್ನು ಉಳ್ಳಾಲ ಕೋಡಿ ನಿವಾಸಿಗಳಾದ ಶೋಯೆಬ್ ಅಕ್ತರ್, ಮಹಮ್ಮದ್ ಮುಝಮ್ಮಿಲ್, ಅಮೀನ್ ಹಾಗೂ ಹುಸೇನ್ ಎಂದು ಗುರುತಿಸಲಾಗಿದ್ದು, ಕಾಸರಗೋಡಿನ ಬಂದ್ಯೋಡಿಯ ವ್ಯಕ್ತಿಯೊಬ್ಬರಿಂದ ಖರೀದಿಸಿ ತಂದು ಉಳ್ಳಾಲದ ಖಾಸಾಯಿ ಬೀಫ್ ಸ್ಟಾಲ್ ಒಂದಕ್ಕೆ ಮಾರಾಟ ಮಾಡುತ್ತಿದ್ದರು.

ಆರೋಪಿಗಳಿಂದ ಕಾರು ಹಾಗೂ ದನದ ಮಾಂಸ ವಶಪಡಿಸಿಕೊಳ್ಳಲಾಗಿದೆ.

You may also like

Leave a Comment