Home » Udupi: ಭೂಗತ ಪಾತಕಿ ಬನ್ನಂಜೆ ರಾಜಗೆ ಪೆರೋಲ್‌; ತಂದೆ ಅಂತ್ಯಕ್ರಿಯೆಗೆ ಪೊಲೀಸ್‌ ಬಿಗಿ ಬಂದೋಬಸ್ತ್‌ನಲ್ಲಿ ಉಡುಪಿಗೆ ಆಗಮನ!

Udupi: ಭೂಗತ ಪಾತಕಿ ಬನ್ನಂಜೆ ರಾಜಗೆ ಪೆರೋಲ್‌; ತಂದೆ ಅಂತ್ಯಕ್ರಿಯೆಗೆ ಪೊಲೀಸ್‌ ಬಿಗಿ ಬಂದೋಬಸ್ತ್‌ನಲ್ಲಿ ಉಡುಪಿಗೆ ಆಗಮನ!

0 comments

Udupi: ಭೂಗತ ಪಾತಕಿ ಬನ್ನಂಜೆ ರಾಜಾ ತಂದೆ ಸುಂದರ ಶೆಟ್ಟಿಗಾರ (86) ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ 14 ದಿನಗಳ ಪೆರೋಲೆ ರಜೆಯಲ್ಲಿತನ್ನ ಹುಟ್ಟೂರು ಉಡುಪಿಗೆ ಬಂದಿದ್ದು, ಮಲ್ಪೆ ಬಾಪುತೋಟದಲ್ಲಿ ಅಂತಿಮ ವಿಧಿ ವಿಧಾನ ನೆರವೇರಿದೆ.

ಮಲ್ಪೆ ಹಿಂದೂ ರುದ್ರ ಭೂಮಿಯಲ್ಲಿ ಬನ್ನಂಜೆ ರಾಜಾ ತಂದೆಯ ಅಂತ್ಯ ಸಂಸ್ಕಾರ ನಡೆದಿದೆ. ಕುಟುಂಬದ ಸದಸ್ಯರು ನೂರಾರು ಆಪ್ತರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಉದ್ಯಮಿ ಆರ್‌.ಎನ್‌.ನಾಯಕ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಬನ್ನಂಜೆ ರಾಜ ಬೆಳಗಾವಿಯಲ್ಲಿ ಹಿಂಡಲಗಾ ಜೈಲಿನಲ್ಲಿದ್ದ. ತಂದೆ ಮರಣದ ಕಾರಣ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲು ಹೈಕೋರ್ಟ್‌ಗೆ ಪೆರೋಲ್‌ ಅರ್ಜಿ ಸಲ್ಲಿಸಿದ್ದ. ಕೋರ್ಟ್‌ ಪೆರೋಲ್‌ ನೀಡಿದ್ದು, ಪೊಲೀಸ್‌ ಭದ್ರತೆಯಲ್ಲಿ ಬನ್ನಂಜೆ ರಾಜಾನನನ್ನು ಉಡುಪಿಗೆ ಕರೆತರಲಾಗಿದೆ.

ಹಲವಾರು ಕಟ್ಟುನಿಟ್ಟಿನ ಷರತ್ತುಗಳನ್ನು ಪೆರೋಲ್‌ ಸಮಯದಲ್ಲಿ ನೀಡಲಾಗಿದೆ. ಮೊಬೈಲ್‌ ಫೋನ್‌ ಅಥವಾ ಇಂಟರ್‌ನೆಟ್‌ ಬಳಸಲು ಅನುಮತಿ ಇಲ್ಲ. ಅಂತ್ಯಕ್ರಿಯೆ ಆಚರಣೆಗಳಲ್ಲಿ ಪಾಲ್ಗೊಳ್ಳುವುದನ್ನು ಹೊರತುಪಡಿಸಿ ತಮ್ಮ ಮನೆಯಿಂದ ಹೊರಗೆ ಹೋಗಲು ಅನುಮತಿ ಇಲ್ಲ.

You may also like