Price for Cinema Tickets: ಗೃಹ ಸಚಿವ ಜಿ.ಪರಮೇಶ್ವರ್ ಅವರು ರಾಜ್ಯ ಸರಕಾರದಿಂದ ಸಿನಿಮಾ ಟಿಕೆಟ್‌ಗೆ ಏಕರೂಪ ದರ ನಿಗದಿ ಮಾಡಲಿರುವ ಕುರಿತು ಸುಳಿವು ನೀಡಿದ್ದಾರೆ.
ʼಚಿತ್ರಮಂದಿರದ ಮಾಲೀಕರೇ ಟಿಕೆಟ್ ದರ ನಿಗದಿ ಮಾಡುವ ಪರಿಸ್ಥಿತಿ ಇದೆ. ಬೇಕಾಬಿಟ್ಟಿಯಾಗಿ ದರ ಫಿಕ್ಸ್ ಮಾಡಲಾಗಿದೆ. ಮಲ್ಟಿಫ್ಲೆಕ್ಸ್‌ಗಳು ಬೇಕಾಬಿಟ್ಟಿ ವಸೂಲಿ ಮಾಡುತ್ತಿದೆ. ಕನ್ನಡ ಸಿನಿಮಾಗಳಿಗೆ ರೂ.100,200 ಇದ್ದರೆ ಪರಭಾಷಾ ಸಿನಿಮಾದ ಟಿಕೆಟ್‌ಗೆ ರೂ.500,1000 ಇದೆ. ಹಾಗೆ ವಾಟರ್ ಬಾಟಲ್ ಕೂಡಾ ಚಿತ್ರಮಂದಿರದೊಳಗೆ ತರುವಂತಿಲ್ಲ. ಅಲ್ಲದೆ ಚಿತ್ರಮಂದಿರದಲ್ಲಿ ವಾಟರ್ ಬಾಟಲ್ ಸೇರಿ ಎಲ್ಲವನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸಿನಿಮಾ ಟಿಕೆಟ್ ದರಕ್ಕಿಂತ ಗ್ರಾಹಕರಿಗೆ ತಿನಿಸುಗಳ ಬೆಲೆಯೇ ಹೆಚ್ಚಿದೆ. ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿನಿಮಾ ಟೆಕೆಟ್‌ಗೆ ಏಕರೂಪ ದರ ನಿಗದಿ ಮಾಡಲು ಚಿಂತನೆ ಮಾಡಿದ್ದೇವೆ ಎಂದು ಅವರು ಹೇಳಿದರು.
ದರ ನಿಯಂತ್ರಣ ಮಾಡದಿದ್ದರೆ, ಚಿತ್ರಮಂದಿರ ಮಾಲೀಕರು ಅವರ ಇಷ್ಟದ ದರ ನಿಗದಿ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಏಕರೂಪದ ದರ ಪದ್ಧತಿಯನ್ನು ಜಾರಿಗೆ ತರುತ್ತೇವೆ ಎಂದು ಹೇಳಿದರು.
