Home » Kodagu: CRPF ಕಮಾಂಡರ್ ಕೊಡಗಿನ ಆದರ್ಶ್ ಶಾಸ್ತ್ರಿರವರಿಗೆ ಕೇಂದ್ರ ಗೃಹ ಸಚಿವರಿಂದ ಗೌರವ!

Kodagu: CRPF ಕಮಾಂಡರ್ ಕೊಡಗಿನ ಆದರ್ಶ್ ಶಾಸ್ತ್ರಿರವರಿಗೆ ಕೇಂದ್ರ ಗೃಹ ಸಚಿವರಿಂದ ಗೌರವ!

0 comments

Kodagu: ಉತ್ತರ್ ಖಾಂಡ್ ಪ್ಲಾಟೂನ್ ಕೇಂದ್ರ ಪೊಲೀಸ್ ಮೀಸಲು ಪಡೆ (ಸಿ.ಆರ್.ಪಿ.ಎಫ್) ಯಲ್ಲಿ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೊಡಗು (Kodagu) ಜಿಲ್ಲೆ ವಿರಾಜಪೇಟೆಯ ಸಿ.ಎನ್. ಆದರ್ಶ್ ಶಾಸ್ತ್ರಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಗೌರವಕ್ಕೆ ಪಾತ್ರರಾಗಿದ್ದಾರೆ.

ನೆನ್ನೆ ದಿನ ಮಧ್ಯಪ್ರದೇಶದಲ್ಲಿ ನಡೆದ ಸಿ.ಆರ್.ಪಿ.ಎಫ್. ಸ್ಥಾಪನಾ ದಿನಾಚರಣೆಯ ಪೆರೇಡ್ ನಲ್ಲಿ ಸಿ.ಎನ್. ಆದರ್ಶ್ ಶಾಸ್ತ್ರಿ ಅವರು ಕಮಾಂಡರ್ ಆಗಿ ಉತ್ತರ್ ಖಾಂಡ್ ಸಿ.ಆರ್.ಪಿ.ಎಫ್ ಪ್ಲಾಟೂನ್ ಅನ್ನು ಮುನ್ನಡೆಸಿದ್ದರು. ಈ ಸಂದರ್ಭ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿ.ಎನ್. ಆದರ್ಶ್ ಶಾಸ್ತ್ರಿರವರನ್ನು ಗೌರವಿಸಿದರು.

ಉತ್ತರ್ ಖಾಂಡ್ ಸಿ.ಆರ್.ಪಿ.ಎಫ್ ಪ್ಲಾಟೂನ್ ಕಮಾಂಡರ್ ಸಿ.ಎನ್. ಆದರ್ಶ್ ಶಾಸ್ತ್ರಿ ಅವರು ಕಳೆದ ವರ್ಷ ಅಮರನಾಥ ಯಾತ್ರೆ ಸಂದರ್ಭ ಯಾತ್ರಾರ್ಥಿಗಳ ರಕ್ಷಣಾ ಕಾರ್ಯದ ಮುಂದಾಳತ್ವವಹಿಸಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ್ದರು.

You may also like