Shocking : ರಾಷ್ಟ್ರ ರಾಜಕಾರಣದಲ್ಲಿ ಒಂದು ಆತಂಕಕಾರಿ ಘಟನೆ ನಡೆದಿದ್ದು, ಕೇಂದ್ರ ಸಚಿವ ಸಚಿವ ಜುವಾಲ್ ಒರಾಮ್, ದೆಹಲಿಯಿಂದ ಜಬಲ್ಪುರಕ್ಕೆ ಗೋಂಡವಾನ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಹಸ್ಯವಾಗಿ ಕಾಣೆಯಾಗಿ ಬಳಿಕ ಸುಮಾರು 3 ಗಂಟೆಗಳ ನಂತರ ಗಾಯಗಳೊಂದಿಗೆ ಪತ್ತೆಯಾಗಿದ್ದಾರೆ. ಇದು ರಾಷ್ಟ್ರ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಒರಾಮ್ ಅವರು ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವರಾಗಿದ್ದು, ಒಡಿಶಾದ ಸುಂದರಗಢದಿಂದ ಲೋಕಸಭಾ ಸಂಸದರಾಗಿದ್ದಾರೆ. ಜುವಾಲ್ ಒರಾಮ್ ಅವರು ದೆಹಲಿಯಿಂದ ಜಬಲ್ಪುರಕ್ಕೆ ಗೋಂಡವಾನ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ, ರೈಲು ಜಬಲ್ಪುರ ತಲುಪಿದಾಗ ಅವರು ಕಾಣಿಸಿಕೊಳ್ಳಲಿಲ್ಲ. ಈ ಬಗ್ಗೆ ತನಿಖೆ ಆರಂಭವಾಗಿತ್ತು. ಹುಡುಕಾಟ ನಡೆದ ಮೂರು ಗಂಟೆಗಳ ಬಳಿಕ ಜಬಲ್‌ಪುರದ ಸಿಹೊರಾ ರೈಲು ನಿಲ್ದಾಣದ ಸಂಪರ್ಕ್ ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಿಕ್ಕಿದ್ದಾರೆಂದು ಮಾಹಿತಿ ಬಂದಿದೆ. ಈ ವೇಳೆ ಜುವಾಲ್ ಒರಾಮ್ ಅವರ ಕೈ ಹಾಗೂ ಕಾಲಿಗೆ ಗಾಯಗಳಾಗಿದ್ದವು ಎಂದು ಹೇಳಲಾಗಿದೆ.
ಆದರೆ ಈ ಮೂರು ಗಂಟೆಗಳ ನಡುವೆ ಏನಾಗಿತ್ತು ಸಚಿವರು ಏಕೆ ನಾಪತ್ತೆಯಾದರು ಎಂಬುದು ಇದುವರೆಗೂ ತಿಳಿದುಬಂದಿಲ್ಲ. ತನಿಖೆಗಳು ಚುರುಕಾಗಿ ನಡೆಯುತ್ತಿವೆ.
