Home » Petrol Bunk: ಪೆಟ್ರೋಲ್ ಬಂಕ್ ಗಳಲ್ಲಿ UPI ಪಾವತಿ ಬಂದ್ – ಹೊಸ ನಿಯಮ ಜಾರಿ

Petrol Bunk: ಪೆಟ್ರೋಲ್ ಬಂಕ್ ಗಳಲ್ಲಿ UPI ಪಾವತಿ ಬಂದ್ – ಹೊಸ ನಿಯಮ ಜಾರಿ

0 comments

Petrol Bunk: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುವ ಆತಂಕ ಮನೆ ಮಾಡಿರುವ ಬೆನ್ನಲ್ಲೇ ಪೆಟ್ರೋಲ್ ಬಂಕ್ಗಳು ಮಹತ್ವದ ನಿರ್ಧಾರವನ್ನು ಮಾಡಿವೆ.

ಹೌದು, ಪೆಟ್ರೋಲ್ ಪಂಪ್ ಮಾಲೀಕರು ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ದೇಶದ ಪೆಟ್ರೋಲ್‌ ಪಂಪ್‌ಗಳಲ್ಲಿ ಇನ್ನುಮುಂದೆ UPI ಅಥವಾ ಕಾರ್ಡ್‌ ಬಳಸಿ ಹಣ ಪಾವತಿ ಮಾಡುವ ನಿಯಮ ರದ್ದಾಗಬಹುದು.

ಮೇ 10ರಿಂದಲೇ ಲಕ್ಷಾಂತರ ಪೆಟ್ರೋಲ್‌ ಪಂಪ್‌ಗಳು ಈ ನಿಯಮ ಜಾರಿಗೊಳಿಸಿದ್ದು, ನಿಮ್ಮ ಊರಿನ ಪೆಟ್ರೋಲ್‌ ಬಂಕ್‌ಗಳಲ್ಲೂ ಯುಪಿಐ ಮತ್ತು ಕಾರ್ಡ್‌ ರದ್ದಾಗಬಹುದು. ಈಗಂತು ಇಂಡಿಯಾ-ಪಾಕಿಸ್ತಾನದ ಮಧ್ಯೆ ಯುದ್ಧ ಸದೃಶ ಸನ್ನಿವೇಶ ಉಂಟಾಗಿದೆ. ಇದೇ ಹೊತ್ತಲ್ಲೇ ಸೈಬರ್‌ ವಂಚನೆಯ ಪ್ರಕರಣಗಳೂ ಜಾಸ್ತಿ ಆಗುತ್ತಿರುವುದಾಗಿ ವರದಿಯಾಗಿದೆ. ಸೈಬರ್‌ ಫ್ರಾಡ್‌ಗಳಿಂದಾಗಿ ಪೆಟ್ರೋಲ್‌ ಪಂಪ್‌ಗಳಿಗೆ ತುಂಬ ನಷ್ಟವಾಗುತ್ತಿದೆ. ಇದೇ ಕಾರಣಕ್ಕೆ ಆನ್‌ಲೈನ್‌ ಪೇಮೆಂಟ್‌ ನಿರ್ಬಂಧಿಸಲು ನಿರ್ಧರಿಸಲಾಗಿದೆ ಎಂದು ವಿದರ್ಭ ಪೆಟ್ರೋಲಿಯಂ ಡೀಲರ್‌ ಅಸೋಸಿಯೇಷನ್‌ ಕೂಡ ಹೇಳಿದೆ.

ಇನ್ನು ಫೆಡರೇಶನ್ ಆಫ್ ಆಲ್ ಮಹಾರಾಷ್ಟ್ರ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್, ಈ ವಂಚನೆ ಪ್ರಕರಣಗಳಿಂದ ಹಲವು ಪೆಟ್ರೋಲ್ ಪಂಪ್ ಮಾಲೀಕರ ಬ್ಯಾಂಕ್ ಖಾತೆಗಳು ಬ್ಲಾಕ್ ಆಗಿವೆ ಎಂದು ಹೇಳಿದೆ. ಇದರಿಂದ ಅವರಿಗೆ ಆರ್ಥಿಕ ನಷ್ಟ ಮಾತ್ರವಲ್ಲ, ಇತರ ಪಾವತಿಗಳನ್ನು ಸ್ವೀಕರಿಸುವಲ್ಲಿಯೂ ಸಮಸ್ಯೆಯಾಗಿದೆ. ಅದೇ ರೀತಿ, ನಾಸಿಕ್ ಪೆಟ್ರೋಲ್ ಪಂಪ್ ಡೀಲರ್ಸ್ ಅಸೋಸಿಯೇಷನ್ ಕೂಡ ಕಳವಳ ವ್ಯಕ್ತಪಡಿಸಿದೆ

You may also like