Home » ಉಪ್ಪಿನಂಗಡಿ: ಬೈಕ್‌ಗಳ ಡಿಕ್ಕಿ ಓರ್ವ ಮೃತ್ಯು-ಇಬ್ಬರಿಗೆ ಗಾಯ

ಉಪ್ಪಿನಂಗಡಿ: ಬೈಕ್‌ಗಳ ಡಿಕ್ಕಿ ಓರ್ವ ಮೃತ್ಯು-ಇಬ್ಬರಿಗೆ ಗಾಯ

by Praveen Chennavara
0 comments

ಉಪ್ಪಿನಂಗಡಿ: ಬೈಕ್‌ಗಳೆರಡು ಢಿಕ್ಕಿಯಾಗಿ ಓರ್ವ ಮೃತಪಟ್ಟು ಇನ್ನೊಬ್ಬ ಗಾಯಗೊಂಡ ಘಟನೆ ಬಳಿಯ 34 ನೆಕ್ಕಿಲಾಡಿಯಲ್ಲಿ ಫೆ.27ರ೦ದು ರಾತ್ರಿ ನಡೆದಿದೆ. ಮೃತರನ್ನು ಬಜತ್ತೂರು ಗ್ರಾಮದ ಬೆದೋಡಿ ನಿವಾಸಿ ನವಾಝ್ (34 ವ) ಎಂದು ಗುರುತಿಸ ಲಾಗಿದೆ. ಸಹಸವಾರ ಬೆದ್ರೋಡಿ ನಿವಾಸಿ ರಶೀದ್ ಹಾಗೂ ಇನ್ನೊಂದು ಬೈಕಿನ ಸವಾರ ಸುರೇಶ್ ಗಾಯಗೊಂಡಿದ್ದು, ಅವರು ಪುತ್ತೂರಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಕ್ಕಿಲಾಡಿಯಲ್ಲಿ ಹೋಡಾ ಶೋರೂಂ ಎದುರು ಈ ಘಟನೆ ನಡೆದಿದೆ, ನವಾಝ್ ಕೆಲಸ ಬಿಟ್ಟು ತನ್ನ ಸ್ನೇಹಿತ ರಶೀದ್ ಜತೆ ಮನೆ ಕಡೆಗೆ ಹೋಗುತ್ತಿದ್ದಾಗ ಸುರೇಶ್ ಎಂಬವರು ಚಲಾಯಿಸುತ್ತಿದ್ದ ಬೈಕ್‌ಗೆ ಢಿಕ್ಕಿಯಾಗಿದೆ ಎಂದು ಹೇಳಲಾಗಿದೆ. ಪುತ್ತೂರು ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

You may also like

Leave a Comment