Home » ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಗೆ ಚೂರಿ ಇರಿತ

ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಗೆ ಚೂರಿ ಇರಿತ

0 comments

ಪುತ್ತೂರು : ಉಪ್ಪಿನಂಗಡಿಯ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯೋರ್ವರಿಗೆ ಮದ್ಯ ವ್ಯಸನಿಯೋರ್ವ ಚೂರಿಯಿಂದ ಇರಿದು ಗಾಯಗೊಳಿಸಿದ ಬಗ್ಗೆ ವರದಿಯಾಗಿದೆ.

ಚೂರಿ ಇರಿದ ವ್ಯಕ್ತಿ ಮೂಲತಃ ಸಕಲೇಶಪುರದ ನಿವಾಸಿ ಪ್ರಸಕ್ತ ಪುತ್ತೂರಿನಲ್ಲಿ ವಾಸ್ತವ್ಯವನ್ನು ಹೊಂದಿರುವ ವೆಂಕಟೇಶ್ ಎಂಬಾತನಾಗಿರತ್ತಾನೆ. ಚೂರಿ ಇರಿತಕ್ಕೆ ಒಳಗಾದ ಮಹಿಳೆ ಜಯಶ್ರೀ ಎಂಬವರಾಗಿರುತ್ತಾರೆ. ಆರೋಪಿ ಹಾಗೊಮ್ಮೆ ಈಗೊಮ್ಮೆ ಮಾನಸಿಕ ಅಸ್ವಸ್ಥನಂತೆ ವರ್ತಿಸುವವನೆನ್ನಲಾಗಿದ್ದು, ಮದ್ಯ ಸೇವಿಸಿದಾಗಲೆಲ್ಲಾ ವಿಚಿತ್ರ ವರ್ತನೆ ತೋರುತ್ತಿದ್ದನೆನ್ನಲಾಗಿದೆ. ಅಂತೆಯೇ ಶನಿವಾರ ಬಸ್ ನಿಲ್ದಾಣದಲ್ಲಿ ನಿಂತಿದ್ದ ಜಯಶ್ರೀ ಎಂಬ ಮಹಿಳೆಗೆ ಚೂರಿಯಿಂದ ತಿವಿದು ಗಾಯಗೊಳಿಸಿದ್ದು, ಕೂಡಲೇ ಸ್ಥಳೀಯರು ಆತನ ಮೇಲೆ ಮುಗಿ ಬಿದ್ದು, ಆತನನ್ನುಪೊಲೀಸರಿಗೆ ಒಪ್ಪಿಸಿದ್ದಾರೆ.

ಚೂರಿ ಇರಿತಕ್ಕೆ ಒಳಗಾದ ಮಹಿಳೆ ಕೇಸು ಬೇಡ ಎಂದು ಹೇಳಿದ್ದಾರೆ ಎಂದು ಹೇಳಲಾಗಿದ್ದು, ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಆರೋಪಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment