Home » Uppinangady: ಉಪ್ಪಿನಂಗಡಿ: ಅಕ್ರಮ ದನ ಸಾಗಾಟ: ಮೂವರು ಆರೋಪಿಗಳು ಅರೆಸ್ಟ್!

Uppinangady: ಉಪ್ಪಿನಂಗಡಿ: ಅಕ್ರಮ ದನ ಸಾಗಾಟ: ಮೂವರು ಆರೋಪಿಗಳು ಅರೆಸ್ಟ್!

by V R
0 comments

Uppinangady: ಪಿಕಪ್ ವಾಹನವೊಂದರಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಪ್ರಕರಣದಲ್ಲಿ ಉಪ್ಪಿನಂಗಡಿ (Uppinangady) ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಜು.5ರಂದು ನಡೆದಿದೆ.

ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಪಿಲಿಗೂಡು ಎಂಬಲ್ಲಿ ಪೊಲೀಸರು ಗಸ್ತು ಕರ್ತವ್ಯ ದಲ್ಲಿದ್ದಾಗ, ಪೆದಮಲೆ ಕಡೆಯಿಂದ ಪಿಕಪ್ ವಾಹನದಲ್ಲಿ ದನವನ್ನು ಹೇರಿಕೊಂಡು ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಪಿಕಪ್ ವಾಹನವನ್ನು ನಿಲ್ಲಿಸಿ, ಪರಿಶೀಲಿಸಿದಾಗ ಆರೋಪಿಗಳಾದ ಅಬೂಬಕ್ಕರ್ ಯಾನೆ ಶಮೀ‌ರ್, ಇಮ್ರಾನ್ ಹಾಗೂ ಮೊಹಮ್ಮದ್ ಅಕ್ರಮ್‌ರವರು ಪಿಕಪ್ ವಾಹನದಲ್ಲಿ (ಕೆಎ20, ಬಿ 3993) ದನವನ್ನು ಹಿಂಸಾತ್ಮಕವಾಗಿ ಯಾವುದೇ ಪರವಾನಿಗೆಯನ್ನು ಪಡೆದುಕೊಳ್ಳದೇ ವಧೆ ಮಾಡುವ ಸಲುವಾಗಿ ಸಾಗಾಟ ಮಾಡುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಹಾಗೂ ಪಿಕಪ್ ವಾಹನದಲ್ಲಿದ್ದ 22 ಸಾವಿರ ರೂ. ಮೌಲ್ಯದ ದನವನ್ನು, ಸಾಗಾಟಕ್ಕೆ ಉಪಯೋಗಿಸಿದ 2 ಲಕ್ಷ ರೂ. ಮೌಲ್ಯದ ಪಿಕಪ್ ವಾಹನ ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Heart Attack: ಹೃದಯಾಘಾತ ಪ್ರಕರಣ : ತಾಂತ್ರಿಕ ಸಲಹಾ ಸಮಿತಿಯಿಂದ ಅರೋಗ್ಯ ಸಚಿವರಿಗೆ ವರದಿ ಸಲ್ಲಿಕೆ – ಹೃದಯಾಘಾತಕ್ಕೆ ಕೊರೊನಾ ಲಸಿಕೆ ಕಾರಣನಾ? ವರದಿಯಲ್ಲೇನಿದೆ?

You may also like