Home » ಉಪ್ಪಿನಂಗಡಿ : ಪೆಟ್ರೋಲ್ ಸೇವಿಸಿದ್ದ ಮಹಿಳೆ ಸಾವು

ಉಪ್ಪಿನಂಗಡಿ : ಪೆಟ್ರೋಲ್ ಸೇವಿಸಿದ್ದ ಮಹಿಳೆ ಸಾವು

0 comments

ಉಪ್ಪಿನಂಗಡಿ : ಇಲ್ಲಿಗೆ ಸಮೀಪದ ಪೆರ್ನೆಯ ಸಂಪದಕೋಡಿ ಎಂಬಲ್ಲಿ ಮಹಿಳೆಯೊಬ್ಬರು ಆಕಸ್ಮಿಕವಾಗಿ ಪೆಟ್ರೋಲ್ ಸೇವಿಸಿ ಸಾವಿಗೀಡಾದ ಘಟನೆ ವರದಿಯಾಗಿದೆ.

ಬ೦ಟ್ವಾಳ ನಿವಾಸಿಯಾಗಿರುವ ಪದ್ಮಾವತಿ (79) ರವರು, ದೃಷ್ಟಿ ದೋಷದಿಂದ ಬಳಲುತ್ತಿದ್ದು ಪೆರ್ನೆಯ ಮಗಳ ಮನೆಗೆ ಬಂದಿದ್ದ ವೇಳೆ, ಸೆಪ್ಟೆಂಬರ್ 26 ರಂದು ಮನೆಯಲ್ಲಿನ ಹುಲ್ಲು ಕತ್ತರಿಸುವ ಯಂತ್ರದ ಮೋಟಾರು ಚಾಲನೆಗೆಂದು ಬಾಟ್ಲಿಯಲ್ಲಿ ತಂದಿರಿಸಿದ್ದ ಪೆಟ್ರೋಲ್ ನ್ನು ತಿಳಿಯದೇ ಕುಡಿದಿದ್ದರೆನ್ನಲಾಗಿದೆ.

ಇದರಿಂದ ಅಸಸ್ಥರಾಗಿದ್ದ ಇವರನ್ನು ಮ೦ಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರದಂದು ನಿಧನರಾಗಿದ್ದಾರೆ.

ಮೃತರ ಅಳಿಯ ಉಮಾನಾಥ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ತಾಣೆಯಲ್ಲಿ ಪ್ರಕರಣ ದಾಖಲುಗೊ೦ಡಿದೆ.

You may also like

Leave a Comment