Home » Belthangady: ನಾಯಿ ವಿಚಾರಕ್ಕೆ ಗಲಾಟೆ; ಗ್ರಾಮ ಪಂಚಾಯತ್‌ ನೀರು ನಿರ್ವಾಹಕನಿಂದ ಮಹಿಳೆ, ಮಕ್ಕಳಿಗೆ ಹಲ್ಲೆ, ಅಸಭ್ಯ ಮಾತು; ದೂರು ದಾಖಲು

Belthangady: ನಾಯಿ ವಿಚಾರಕ್ಕೆ ಗಲಾಟೆ; ಗ್ರಾಮ ಪಂಚಾಯತ್‌ ನೀರು ನಿರ್ವಾಹಕನಿಂದ ಮಹಿಳೆ, ಮಕ್ಕಳಿಗೆ ಹಲ್ಲೆ, ಅಸಭ್ಯ ಮಾತು; ದೂರು ದಾಖಲು

0 comments

Belthangady: ಬೆಳಾಲು ಗ್ರಾಮದ ಏರ್ದೊಟ್ಟು ಮನೆಯ ಸುಮಿತ್ರಾ ಮತ್ತು ಅವರ ಮಕ್ಕಳಿಗೆ ನಾಯಿ ವಿಚಾರದಲ್ಲಿ ಗ್ರಾಮ ಪಂಚಾಯತ್‌ ನೀರು ನಿರ್ವಾಹಕ ಶಶಿಧರ್‌ ಎಂಬುವರು ಹಲ್ಲೆ ಮಾಡಿರುವ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿರುವ ಕುರಿತು ವರದಿಯಾಗಿದೆ.

ಪ್ರಕರಣದ ವಿವರ: ಬೆಳಾಲು ಗ್ರಾ.ಪಂ. ನೀರು ನಿರ್ವಾಹಕ ಶಶಿಧರ ಎಂಬುವವರಿಗೆ ಸೇರಿದ ನಾಯಿ ಸುಮಿತ್ರಾ ಅವರ ಮನೆಯ ನಾಯಿಗೆ ಕಚ್ಚಿ ಕೊಂದಿತ್ತು. ಈ ವಿಚಾರ ತಿಳಿಸಲೆಂದು ಸುಮಿತ್ರಾ ಅವರು ತನ್ನ ಮನೆಯ ಎದುರಿನ ರಸ್ತೆಗೆ ಹೋಗಿ ಶಶಿಧರ ಅವರಲ್ಲಿ ತಿಳಿಸಿದಾಗ ಶಶಿಧರ ಅವರು ನನ್ನ ನಾಯಿ ನಿಮ್ಮ ನಾಯಿಯನ್ನು ಕೊಂದಿಲ್ಲ ಎಂದು ಏರುಧ್ವನಿಯಲ್ಲಿ ಮಾತನಾಡಿ ಮಾನಕ್ಕೆ ಕುಂದು ತರುವ ರೀತಿಯಲ್ಲಿ ಎದೆಗೆ ಕೈ ಹಾಕಿ ದೂಡಿದ್ದು, ಪರಿಣಾಮ ಕೆಳಗೆ ಬಿದ್ದಿದ್ದಾರೆ.

ಕೂಡಲೇ ಮಕ್ಕಳು ಬಂದು ಮೇಲಕ್ಕೆ ಎತ್ತಿ ಉಪಚರಿಸಿದಾಗ ಶಶಿಧರ್‌ ಮಕ್ಕಳ ಬಲ ಕೆನ್ನೆಗೆ ಕೈಯಿಂದ ಹೊಡೆದು ಕೈಯಿಂದ ದೂಡಿ ನಿನ್ನೆ ಮನೆಯಲ್ಲಿ ಹೆಣ್ಣುಮಕ್ಕಳೇ ಇರುವುದು ನಿಮ್ಮ ಅತ್ಯಾಚಾರ ಮಾಡಿದರೂ ಕೇಳುವವರಿಲ್ಲವೆಂದು ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದಿರುವ ಕುರಿತು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like