Home » Urea Scarcity: ರಾಜ್ಯದಲ್ಲಿ ಯೂರಿಯಾ ಗೊಬ್ಬರ ಕೊರತೆ : ಅತ್ತ ರೈಸ್‌ ಮಿಲ್‌ನಲ್ಲಿ ಸಂಗ್ರಹಿಸಿದ್ದ ಅಕ್ರಮ ಯೂರಿಯಾ ಪತ್ತೆ

Urea Scarcity: ರಾಜ್ಯದಲ್ಲಿ ಯೂರಿಯಾ ಗೊಬ್ಬರ ಕೊರತೆ : ಅತ್ತ ರೈಸ್‌ ಮಿಲ್‌ನಲ್ಲಿ ಸಂಗ್ರಹಿಸಿದ್ದ ಅಕ್ರಮ ಯೂರಿಯಾ ಪತ್ತೆ

0 comments

Urea Scarcity: ಚಾಮರಾಜ ನಗರದ ನಂಜನಗೂಡಿನ ಹುಲ್ಲ ಹಳ್ಳಿ ರಸ್ತೆಯ ಗೌಸಿಯಾ ರೈಸ್ ಮಿಲ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 200 ಮೂಟೆ ಯೂರಿಯಾ ದಾಸ್ತಾನನ್ನು ರೈತ ಸಂಘದ ಕಾರ್ಯಕರ್ತರು ಪತ್ತೆ ಹಚ್ಚಿದ್ದಾರೆ.

ರೈತ ಸಂಘದ ತಾಲೂಕು ಅಧ್ಯಕ್ಷ ಸತೀಶ್ ರಾವ್ ನೇತೃತ್ವದಲ್ಲಿ ರೈತ ಸಂಘದ ಕಾರ್ಯ ಕರ್ತರು ಯೂರಿಯಾವನ್ನು ಪತ್ತೆ ಹಚ್ಚಿ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀ ಸರಿಗೆ ಮಾಹಿತಿ ನೀಡಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ರವಿ ಅಕ್ರಮ ಯೂರಿಯಾ ಮೂಟೆಗಳನ್ನು ವಶಕ್ಕೆ ಪಡೆದರು.

ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ಕಳೆದ 20 ದಿನಗಳಿಂದ ರೈಸ್‌ಮಿಲ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿ ರುವ ಯೂರಿಯಾವನ್ನು ಕೇರಳಕ್ಕೆ ವೈನಾಡಿನ ಮಹಮ್ಮದ್ ಫಾಜಿಲ್ ಎಂಬಾತ ಸಾಗಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಕರ್ತರೊಂದಿಗೆ ಸ್ಥಳಕ್ಕೆ ತೆರಳಿದ ವೇಳೆ ಟ್ರಕ್‌ನಲ್ಲಿ ಒಂದು ಲೋಡ್ ಯೂರಿಯಾ ಸಾಗಿಸಲಾಗಿತ್ತು. ಈ ವೇಳೆ ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮಿಲ್‌ನಲ್ಲಿ ಸಂಗ್ರಹಿಸಿದ್ದ 200ಕ್ಕೂ ಹೆಚ್ಚು ಮೂಟೆ ಯೂರಿಯಾವನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಕೇಂದ್ರ ಸರ್ಕಾರ 1477 ರೂ. ಬೆಲೆಯ 50 ಕೆಜಿ ಯೂರಿಯಾವನ್ನು ರೈತರಿಗೆ 266 ರೂ.ಗಳಿಗೆ ಸಬ್ಸಿಡಿ ದರದಲ್ಲಿ ನೀಡುತ್ತಿದೆ. ಯೂರಿಯಾ ಪಡೆಯಲು ರೈತರು ದಾಖಲೆ ನೀಡಿ 2 ದಿನಗಳ ಕಾಲ ಸರದಿ ಯಲ್ಲಿ ನಿಂತು ಪಡೆಯಬೇಕಾಗಿದೆ. ಆದರೆ ನೂರಾರು ಮೂಟೆ ಯೂರಿಯಾ ಕಳ್ಳ ಸಾಗಾಣಿಕೆದಾರರಿಗೆ ಸಿಗುವುದು ಹೇಗೆ? ನಮ್ಮ ವ್ಯವಸ್ಥೆಯಲ್ಲೇ ಲೋಪವಿದೆ. ಅಕ್ರಮ ತಡೆಯಬೇಕಾದ ಅಧಿಕಾರಿಗಳು ಸುದೀರ್ಘ ನಿದ್ದೆಯಲ್ಲಿದ್ದಾರೆ. ಈ ರೀತಿಯ ಅಕ್ರಮ ಗಳಿಂದಾಗಿ ರಾಜ್ಯದಲ್ಲಿ ರೈತರಿಗೆ ಯೂರಿಯಾ ದೊರೆಯದೆ ಕೃತಕ ಅಭಾವ ಉಂಟಾಗುತ್ತಿದೆ.

ಸರ್ಕಾರ ಅಕ್ರಮ ಯೂರಿಯಾ ಸಾಗಾಣಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮವಹಿಸಬೇಕು ಎಂದು ಹೇಳಿದರು. ಸಹಾಯಕ ಕೃಷಿ ನಿರ್ದೇಶಕ ಎಸ್.ಕೆ. ರವಿ ಮಾತನಾಡಿ ರೈಸ್‌ಮಿಲ್‌ನಲ್ಲಿ ಅಕ್ರ ಮವಾಗಿ ಸಂಗ್ರಹಿಸಿದ್ದ 200 ಯೂರಿಯಾ ಮೂಟೆಗಳನ್ನು ವಶಕ್ಕೆ ಪಡೆದು ಎಪಿಎಂಸಿಗೆ ಸಾಗಿಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾ ಗಿದೆ. ಸೂಕ್ತ ಕ್ರಮವಹಿಸಲಾಗುವದು ಎಂದರು.

ಈ ವೇಳೆ ಸಿಪಿಐ ಸುನೀಲ್ ಕುಮಾರ್, ರೈತ ಸಂಘದ ತಾಲೂಕು ಅಧ್ಯಕ್ಷ ಸತೀಶ್‌ ರಾವ್, ಜಿಲ್ಲಾ ಕಾರ್ಯದರ್ಶಿ ರಘು, ಗಾರೆ ಮಹದೇವನಾಯ್ಕ, ತಿಮ್ಮನಾಯಕ, ಮಾದೇವ ನಾಯ್ಕ, ವೇಣು ಗೋಪಾಲ್, ನಾಗರಾಜು ಉಪಸ್ಥಿತರಿದ್ದರು.

ಇದನ್ನು ಓದಿ: Anil Ambani: ಬಹು ವಂಚನೆ ಪ್ರಕರಣ: ಇಡಿ ಕಚೇರಿಯಲ್ಲಿ ಅನಿಲ್ ಅಂಬಾನಿ

You may also like