Home » Urfi javed: ಹೃದಯ ಕಿತ್ತು ಮೊಲೆ ಮುಚ್ಚಿಕೊಂಡ ಉರ್ಫಿ ಜಾವೇದ್!! ವಿಡಿಯೋ ವೈರಲ್

Urfi javed: ಹೃದಯ ಕಿತ್ತು ಮೊಲೆ ಮುಚ್ಚಿಕೊಂಡ ಉರ್ಫಿ ಜಾವೇದ್!! ವಿಡಿಯೋ ವೈರಲ್

by ಹೊಸಕನ್ನಡ
0 comments

Urfi javed: ಸದಾ ತಮ್ಮ ಔಟ್‌ ಫಿಟ್‌ ಕುರಿತು ಟ್ರೆಂಡ್‌ನಲ್ಲಿರೋ ಉರ್ಫಿ ಜಾವೇದ್‌ (Urfi Javed) ಇದೀಗ ಹೃದಯ ಕಿತ್ತು ಎದೆ ಮುಚ್ಚಿಕೊಂಡು ಪಾರ್ಟಿಗೆ ಬಂದಿದ್ದಾರೆ. ಅನೇಕರು ಉರ್ಫಿ ಜತೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಇದೀಗ ಉರ್ಫಿಯ ಈ ಹೊಸ ಅವತಾರದ ವಿಡಿಯೋ ಭಾರೀ ವೈರಲ್ ಆಗ್ತಿದೆ.

ಹೌದು, ಟಾಪ್‌ಲೆಸ್‌(Top less) ವಿಡಿಯೊ, ಫೋಟೊಗಳನ್ನು ಉರ್ಫಿ ಜಾವೇದ್‌ (Urfi Javed) ಹಂಚಿಕೊಳ್ಳುವುದು ಮೊದಲೇನಲ್ಲ. ಅಂತೆಯೇ ಇದೀಗ ವಿಚಿತ್ರ ಫ್ಯಾಷನ್ ನಿಂದಲೇ ಫೇಮಸ್ ಆಗಿರುವ ಹಿಂದಿ ಮಾಜಿ ಬಿಗ್ ಬಾಸ್ ಸ್ಪರ್ಧಿ (Bigg Boss) ಉರ್ಫಿ ಜಾವೇದ್ ಶನಿವಾರ ನಡೆದ ಪಾರ್ಟಿವೊಂದರಲ್ಲಿ ವಿಶೇಷ ಕಾಸ್ಟ್ಯೂಮ್ (Costume)ನಲ್ಲಿ ಕಾಣಿಸಿಕೊಂಡಿದ್ದು, ಹೃದಯ (Heart) ಕಿತ್ತು ಎದೆಗೆ ಹಚ್ಚಿಕೊಂಡು, ಮೊಲೆ ಮುಚ್ಚಿಕೊಂಡು ಪಾರ್ಟಿಗೆ ಬಂದಿದ್ದಾರೆ. ಅನೇಕರು ಉರ್ಫಿ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಈ ಫೋಟೋ, ವಿಡಿಯೋ ಎಲ್ಲೆಡೆ ವೈರಲ್ ಕೂಡ ಆಗಿದೆ.

ಅಂದಹಾಗೆ ಉರ್ಫಿ ಜಾವೇದ್ ತನ್ನ ಫೋಟೊಶೂಟ್‌ನಿಂದ(Photo shoot) ಪೋಸ್ಟ್ ಮಾಡಿದ ವೀಡಿಯೊದಲ್ಲಿ, ರಿಸ್ಕ್ ಕಟ್-ಔಟ್ ಬಿಳಿಯ ಉಡುಪನ್ನು ಧರಿಸಿದ್ದಾರೆ. ಕೈಯಲ್ಲಿ ಕೆಂಪು ದುಪಟ್ಟಾವನ್ನು ಸಹ ಹಿಡಿದಿದ್ದಾರೆ. ಈ ರೀತಿ ಟಾಪ್‌ಲೆಸ್‌ ಆದಂತಹ ಹಲವಾರು ವಿಡಿಯೊಗಳನ್ನು ನಟಿ ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕೆಲವು ವಿಡಿಯೊಗಳಲ್ಲಿ ಟಾಪ್‌ ಲೆಸ್‌ ಆದರೆ ಕೆಲವಲ್ಲಿ ಬಾಟಮ್‌ ಲೆಸ್‌ ಆಗಿ, ಇನ್ನು ಕೆಲವಲ್ಲಿ ಬ್ಯಾಕ್‌ಲೆಸ್‌ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಅರೆಬರೆ ಉಡುಪು ಧರಿಸುವ ಮೂಲಕವೇ ಫೇಮಸ್ ಆಗಿರುವ ಉರ್ಫಿ ಜಾವೇದ್ (Urfi Javed) ಮೊನ್ನೆಯಷ್ಟೇ ಮೈ ತುಂಬಾ ಬಟ್ಟೆ ಹಾಕಿ ಅಚ್ಚರಿ ಮೂಡಿಸಿದ್ದರು. ವಿಚಿತ್ರ ಬಟ್ಟೆಗಳನ್ನ ಧರಿಸೋದ್ರಲ್ಲಿ ಯಾವಾಗಲೂ ಮುಂದಿದ್ದ ಉರ್ಫಿ ಮೊಟ್ಟ ಮೊದಲ ಬಾರಿಗೆ ಮೈತುಂಬಾ ಬಟ್ಟೆ ಧರಿಸಿ ಏಲಿಯನ್ ರೂಪದಲ್ಲಿ ಹೊರಗೆ ಬಂದಿದ್ದರು. ಆ ಕಾಸ್ಟ್ಯೂಮ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

You may also like

Leave a Comment