Iran –America: ಅಮೆರಿಕದ ದಾಳಿಗಳು ಇರಾನ್‌ನ ಮೂರು ಪರಮಾಣು ಸೌಲಭ್ಯಗಳಿಗೂ ‘ಭಾರಿ ಹಾನಿ’ ಉಂಟುಮಾಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. “ವಿನಾಶವು ಸರಿಯಾದ ಪದ. ನೆಲದ ಕೆಳಗೆ ಬಹಳಷ್ಟು ಹಾನಿ ಸಂಭವಿಸಿದೆ” ಎಂದು ಅವರು ಟೂತ್ ಸೋಷಿಯಲ್‌ನಲ್ಲಿ ಬರೆದಿದ್ದಾರೆ. ಅದೇ ಸಮಯದಲ್ಲಿ, ಈ ದಾಳಿಯಲ್ಲಿ ಇರಾನ್ ಸೌಲಭ್ಯಗಳಿಗೆ ಹೆಚ್ಚಿನ ಹಾನಿಯಾಗಿಲ್ಲ ಎಂದು ಇರಾನ್ ಹೇಳಿದೆ.
ಇದಕ್ಕೂ ಮೊದಲು, ‘ಮಿಡ್‌ನೈಟ್ ಹ್ಯಾಮರ್’ ಕಾರ್ಯಾಚರಣೆಯ ಅಡಿಯಲ್ಲಿ ಅಮೆರಿಕವು ಇರಾನ್ ನ ಫೋರ್ಡೋ, ನಾಂಟೆಸ್ ಮತ್ತು ಇಸ್ಪೃಹಾನ್ ಮೇಲೆ ಪ್ರಬಲ ಬಾಂಬ್ ಗಳನ್ನು ಬೀಳಿಸಿತ್ತು. ಅಮೆರಿಕದ ಬಿ -2 ಬಾಂಬರ್ ವಿಮಾನವು ಸುಮಾರು 25 ನಿಮಿಷಗಳ ಕಾಲ ಇರಾನಿನ ತಾಣಗಳ ಮೇಲೆ ಬಾಂಬ್‌ಗಳನ್ನು ಬೀಳಿಸಿತು, ನಂತರ ಈ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.
ಸೋಮವಾರ ಟೂತ್ ಸೋಶಿಯಲ್‌ನಲ್ಲಿ ಟ್ರಂಪ್ ಬರೆದಿರುವ ಲೇಖನದಲ್ಲಿ, ಇರಾನ್ ಮೇಲಿನ ದಾಳಿಗೆ ವಿನಾಶವೇ ಸರಿಯಾದ ಪದ ಎಂದು ಬರೆದಿದ್ದಾರೆ. “ಇರಾನ್‌ನ ಎಲ್ಲಾ ಪರಮಾಣು ತಾಣಗಳು ತೀವ್ರವಾಗಿ ಹಾನಿಗೊಳಗಾಗಿವೆ” ಎಂದು ಟ್ರಂಪ್ ಬರೆದಿದ್ದಾರೆ.
ಅನುಮಾನದ ಸ್ಥಿತಿ
ಟ್ರಂಪ್ ಅವರ ಭಾರೀ ನಷ್ಟಗಳ ಹೇಳಿಕೆಗಳು ಮತ್ತು ಇರಾನಿನ ಸೌಲಭ್ಯಗಳಿಗೆ ಸ್ಪಷ್ಟ ಹಾನಿಯನ್ನು ತೋರಿಸುವ ಉಪಗ್ರಹ ಚಿತ್ರಗಳ ಹೊರತಾಗಿಯೂ, ನೈಜ ಪರಿಸ್ಥಿತಿಯ ಬಗ್ಗೆ ಇನ್ನೂ ಅನುಮಾನಗಳಿವೆ. ದಾಳಿಗಳು ಇರಾನಿನ ಸೌಲಭ್ಯಗಳಿಗೆ ಹೆಚ್ಚಿನ ಹಾನಿಯನ್ನುಂಟುಮಾಡಿಲ್ಲ ಎಂದು ಇರಾನ್ ಹೇಳಿದೆ. ಯುಎಸ್ ದಾಳಿಗೆ ಮುನ್ನ ಯುರೇನಿಯಂ ಮತ್ತು ಇತರ ವಸ್ತುಗಳನ್ನು ಪರಮಾಣು ಸೌಲಭ್ಯದಿಂದ ತೆಗೆದುಹಾಕಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಟೇಟ್ ಟಿವಿ ವರದಿ ಮಾಡಿದೆ.
ಇರಾನ್ ಯುರೇನಿಯಂ ಅನ್ನು ತೆಗೆದುಹಾಕಿತ್ತು.
ರಾಯಿಟರ್ಸ್ ವರದಿಯ ಪ್ರಕಾರ, ಅಮೆರಿಕದ ದಾಳಿಗೆ ಮುನ್ನ ಇರಾನ್ ಬಹುಶಃ ಫೋರ್ಡೊದಿಂದ ಶಸ್ತ್ರಾಸ್ತ್ರ ದರ್ಜೆಯ ಯುರೇನಿಯಂ ಅನ್ನು ಸಾಗಿಸಿರಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಇರಾನ್ ಈಗ ಈ ಯುರೇನಿಯಂ ಅನ್ನು ಅಮೆರಿಕ ಮತ್ತು ಇಸ್ರೇಲ್ ತಲುಪದಂತೆ ಬಹಳ ದೂರದಲ್ಲಿ ಮರೆಮಾಡಬಹುದು ಎಂದು ತಜ್ಞರು ಹೇಳಿದ್ದಾರೆ.
